ಮಡಿಕೇರಿ : ಕೊರಗಜ್ಜ ದೈವದ ನರ್ತಕನೊಬ್ಬ ಬಾಲಕಿಯೊಂದಿಗೆ ಕೋಲದ ತಾಸಿನ ಪೆಟ್ಟಿಗೆ ಮತ್ತು ಕೊಳಲಿನ ನಾದಕ್ಕೆ ಸಿನೀಮಿಯ ರೀತಿಯಾದ ನೃತ್ಯವನ್ನು ಮಾಡಿದ್ದು ವಿಡಿಯೋ ವೈರಲ್ ಆಗುತ್ತಿದೆ.
ಯಾವಾಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತೋ ದೈವಾರಾಧನೆಯ ಸಂಘದಿಂದ ಬಹಳಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದು, ಇಂಥವರಿಂದ ನಮ್ಮ ದೈವಾರಧನೆಗೆ ಅವಮಾನ ಆಗುತ್ತಿದೆ.
ಇವರಿಂದಲೇ ನಮ್ಮ ದೈವರಾಧನೆಗೆ ಬೀದಿಗೆ ಬರುವಂತೆ ಆಯಿತು ಎಂದು ಮಾಧ್ಯಮಗಳ ಮೂಲಕ ಅಳಲು ತೋಡಿಕೊಂಡಿದ್ದಾರೆ.

ಇನ್ನು ವೈರಲ್ ಆದ ಈ ಕೋಲ ಸೇವೆಯು ಮಡಿಕೇರಿಯಲ್ಲಿ ನಡೆದಿದೆ ಅನ್ನುವ ಮಾಹಿತಿ ಇದ್ದು ದೈರ್ವ ನರ್ತಕ ಜಯರಾಮ್ ಕೋಲ ಸೇವೆಯನ್ನು ನಡೆಸಿಕೊಟ್ಟಿದ್ದರು ಅನ್ನುವ ಮಾಹಿತಿ ಇದೆ. ಇತ್ತ ವಿಡಿಯೋ ವಿಚಾರವಾಗಿ ದೈವ ನರ್ತಕ ಜಯರಾಮ್ ಅವರನ್ನು ದೈವಾರಾಧನೆ ಸಂಘದ ಸಿದ್ಧು ಅವರು ಪಶ್ನೆ ಮಾಡಿದಾಗ ಜಯರಾಮ್ ಸಿದ್ಧು ಅವರಿಗೆ ಮನಸೋ ಇಚ್ಛೆ ಬೈದಿದ್ದಾರೆ ಅನ್ನುವ ಮಾಹಿತಿಗಳು ಲಭ್ಯವಾಗಿದೆ.

