ಬೆಳ್ತಂಗಡಿ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಆರಂಬೋಡಿ 2025-26 ನೇ ಸಾಲಿನ ಶಾಲಾ ಪ್ರಾರಂಭೋತ್ಸವದಂದು ಶಾಲೆಗೆ ಕೊಡುಗೆಯನ್ನು ನೀಡಿದ ಗಣ್ಯರನ್ನು ವಿಶೇಷವಾಗಿ ಅಭಿನಂದಿಸಲಾಗಿದೆ.

ಆರಂಬೋಡಿ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮನೋಜ್ ಶೆಟ್ಟಿ ಐತೇರಿ ರಮೇಶ್ ಅಬುರ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಿದರು. ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಅಧ್ಯಕ್ಷರಾದ ವಕೀಲರು ಸುರೇಶ್ ಶೆಟ್ಟಿ ನಮ್ಮ ಶಾಲೆಗೆ ಸೌಂಡ್ಸ್ ಸಿಸ್ಟಮ್ ಕೊಡುಗೆಯಾಗಿ ನೀಡಿದರು. ಅದೇ ರೀತಿ ರಾಘವೇಂದ್ರ ಭಟ್ ಶಾಲಾ ಮಕ್ಕಳಿಗೆ ಛತ್ರಿ ವಿತರಣೆ ಮಾಡಿದರು.

ಮಂಜುಶ್ರೀ ಎಲೆಕ್ಟ್ರಾನಿಕ್ಸ್ ಮಾಲೀಕರಾದ ಗಣೇಶ್ ಪೂಜಾರಿ ನಮ್ಮ ಶಾಲಾ ನಲಿ ಕಲಿ ಮಕ್ಕಳಿಗೆ ಟೇಬಲ್ ಮತ್ತು ಕುರ್ಚಿಯನ್ನು ನೀಡಿದರು.
ಉದ್ಯಮಿ ಕೃಷಿಕರು ಕಿರಣ್ ಕುಮಾರ್ ಮಂಜಿಲ ಶಾಲಾ ಮಕ್ಕಳಿಗೆ ಸ್ಕ್ವಾಡ್ ಸಮವಸ್ತ್ರ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ವಕೀಲರು ಸುರೇಶ್ ಶೆಟ್ಟಿ ಮತ್ತು ರಾಘವೇಂದ್ರ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಜೀವ ಶೆಟ್ಟಿ ಅಬುರ ಮನೋಜ್ ಶೆಟ್ಟಿ ಐತೇರಿ ರಮೇಶ್ ಅಬುರ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಪೂಜಾರಿ SDMC ಉಪಾಧ್ಯಕ್ಷ ಗಣೇಶ್ ಶೆಟ್ಟಿಗಾರ್, ಪ್ರಭಾಕರ್ ಮೈರಬೆಟ್ಟು ಸೋಮನಾಥ ಪೂಜಾರಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಸುಶೀಲ ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಇಲ್ಯಾಸ್ ಅಬ್ದುಲ್ ಹಕೀಂ ಸ್ವಾಗತಿಸಿ, ಶಾಲಾ ಶಿಕ್ಷಕಿ ವಿಜಯಲಕ್ಷ್ಮಿ ಧನ್ಯವಾದವಿತ್ತರು.

