ಕಿನ್ನಿಗೋಳಿ : ಮೂರುಕಾವೇರಿಯಲ್ಲಿ ಇನೋವಾ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಾರು ಸಂಪೂರ್ಣವಾಗಿ(ಜೂ.06)ರಂದು ಹೊತ್ತಿ ಉರಿದಿದೆ.
ಗ್ಯಾರೇಜ್‌ವೊಂದರಲ್ಲಿ ರಿಪೇರಿಗೆಂದು ಇರಿಸಿದ್ದ ಕಾರು ಮಧ್ಯಾಹ್ನದ ಹೊತ್ತಿಗೆ ಉರಿಯಲಾರಂಭಿಸಿದೆ. ತಕ್ಷಣ ಗ್ಯಾರೇಜ್ ಕಾರ್ಮಿಕರು ಹಾಗೂ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ.
ಘಟನಾ ಸ್ಥಳದಲ್ಲಿ ಅನೇಕ ವಾಹನಗಳಿದ್ದು ಯಾವುದೇ ರೀತಿಯ ಹಾನಿಗಳಾಗಿಲ್ಲ ಎಂದು ತಿಳಿದುಬಂದಿದೆ.




