Breaking
24 Mar 2026, Tue

ಪುತ್ತೂರು ನಗರ ಸಭಾ ಸದಸ್ಯನ ಬೈಕ್,ಮೊಬೈಲ್,ಶರ್ಟ್ ಮತ್ತು ಚಪ್ಪಲಿ ಪಾಣೆಮಂಗಳೂರು ಹಳೆ ಸೇತುವೆ ಬಳಿ ಪತ್ತೆ: ಪೊಲೀಸರಿಂದ ತೀವ್ರ ಶೋಧ ಕಾರ್ಯ

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಬೈಕ್, ಮೊಬೈಲ್, ಶರ್ಟ್ ಮತ್ತು ಚಪ್ಪಲಿ ಅನಾಥವಾಗಿ ಪತ್ತೆ ಯಾಗಿದ್ದು, ಇದು ಪುತ್ತೂರು ಮೂಲದ ವ್ಯಕ್ತಿಗೆ ಸೇರಿದ್ದು ಎಂದು ತಿಳಿದುಬಂದಿದೆ.

ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರ ಸೊತ್ತುಗಳು ಇದಾಗಿದ್ದು,ಅವರು ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರಮೇಶ್ ರೈ ಅವರು ಇತ್ತೀಚಿಗೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ,ಅಯ್ಕೆಯಾಗಿದ್ದರು.
ಜೂನ್ 5 ರಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಸೊತ್ತುಗಳು ಅನಾಥವಾಗಿ ಕಂಡು ಬಂದಿವೆ ಎಂದು ಸ್ಥಳೀಯರು ಪೋಲೀಸರಿಗೆ ತಿಳಿಸಿದ್ದಾರೆ.

ಸ್ಥಳದಲ್ಲಿ ಸಿಕ್ಕಿದ ಮೊಬೈಲ್ ನಿಂದ ನಂಬರ್ ಪಡೆದು ಪೋನ್ ಮಾಡಿದಾಗ ಇದು ಪುತ್ತೂರು ರಮೇಶ್ ರೈ ಅವರದು ಎಂದು ತಿಳಿದು ಬಂದಿದ್ದು,ತಕ್ಷಣವೇ ಮನೆಯವರಿಗೆ ತಿಳಿಸಲಾಗಿದೆ.
ಸ್ಥಳದಲ್ಲಿ ರಮೇಶ್ ರೈ ಅವರ ಕುಟುಂಬದ ಸದಸ್ಯರು ಪೋಲೀಸರು ಹಾಗೂ ಸ್ಥಳೀಯರು ಜಮಾಯಿಸಿದ್ದು ಸುತ್ತ ಮುತ್ತಲಿನ ಜಾಗದಲ್ಲಿ ಶೋಧಕಾರ್ಯ ಮುಂದುವರಿದಿದೆ.

Leave a Reply

Your email address will not be published. Required fields are marked *