Breaking
21 Mar 2026, Sat

ಬಡಗಕಜೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷರ ನಡೆಗೆ ಗ್ರಾಮಸ್ತರಿಂದ ಮೆಚ್ಚುಗೆ

ಬಂಟ್ವಾಳ: ತಾಲೂಕಿನ ಬಡಗಕಜೆಕಾರು ಗ್ರಾಮದಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಹಲವಡೆ ಗುಡ್ಡ ಕುಸಿದಿದ್ದು ಕೆಲವು ಮನೆಯಗಳಿಗೆ ಹಾಗೂ ಕೃಷಿ ಜಮೀನಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಗ್ರಾಮದ ಕಜೆಕಾರು ಎಂಬಲ್ಲಿ ಮನೆಯೊಂದಕ್ಕೆ ರಾತ್ರಿ ಗುಡ್ಡ ಕುಸಿದಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೇವದಾಸ್ ಅಬುರ ಇವರನ್ನು ರಾತ್ರಿ ಸಂಪರ್ಕಿಸಿದಾಗ ಖುದ್ದು ಸ್ಥಳಕ್ಕೆ ಬಂದು ಪುಂಜಾಲಕಟ್ಟೆ ಪೊಲೀಸರ ಸಹಕಾರದೊಂದಿಗೆ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದು ಹಾಗೂ ಇಂದು ಗ್ರಾಮ ಆಡಳಿತ ಅಧಿಕಾರಿಯೊಂದಿಗೆ ಸಮಸ್ಯೆ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮ ಪಂಚಾಯತ್ ಕಾರ್ಯವೈಖರಿ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *