Breaking
22 Mar 2026, Sun

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲಗೊಂಡಿದೆ-ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್‌ನ ಅಧ್ಯಕ್ಷ ಅಶ್ರಫ್ ಕಲ್ಲೇಗ ಪ್ರತಿಕ್ರಿಯೆ

ಪುತ್ತೂರು: ಬಂಟ್ವಾಳದ ತಾಲೂಕಿನಲ್ಲಿ ಹಿಂದುತ್ವವಾದಿಗಳಿ೦ದ ಕೊಲೆಯಾದ ಅಬ್ದುಲ್ ರಹ್ಮಾನ್ ಮತ್ತು ಹಲ್ಲೆಗೊಳಗದ ಖಲಂದರ್ ಘಟನೆಯನ್ನು ನೋಡಿದಾಗ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲಗೊಂಡಿದೆ.ಪೊಲೀಸ್ ಇಲಾಖೆಯ ವೈಫಲ್ಯ ನೇರವಾಗಿ ಕಂಡು ಬಂದಿದೆ.

ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟು ರಾಷ್ಟ್ರಪತಿ ಆಳ್ವಿಕೆ ತರುವಂತೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್‌ನ ಅಧ್ಯಕ್ಷ ಅಶ್ರಫ್ ಕಲ್ಲೇಗ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು ಇತ್ತೀಚೆಗಷ್ಟೆ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಯಾದ ಬಳಿಕ ಅನೇಕ ಕಡೆ ನಡೆದ ಅವರ ಸಂತಾಪ ಸಭೆಯಲ್ಲಿ ಪ್ರತಿಕಾರದ ಭಾಷಣವನ್ನು ನೇರವಾಗಿ ಹಿಂದುತ್ವವಾದಿಗಳು ಮಾಡಿದ್ದಾರೆ.

ಪುತ್ತೂರಿನಲ್ಲಿ ಭರತ್ ಕುಮ್ಮೇಲು, ಬಜ್ಜೆಯಲ್ಲಿ ಶ್ರೀಕಾಂತ್ ಶೆಟ್ಟಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಆದರೆ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಸರಕಾರವೂ ಕೂಡಾ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಗೃಹಸಚಿವರಿಗೆ ಪೊಲೀಸ್ ಇಲಾಖೆಯನ್ನು ಕಂಟ್ರೋಲ್ ಮಾಡುವ ಕ್ಯಾಪಸೀಟಿ ಇಲ್ಲ. ಅತಿಥಿ ಉಪನ್ಯಾಸಕರಂತೆ ಇರುವ ಉಸ್ತುವಾರಿ ಸಚಿವರಿಂದಾಗಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಹಾಗಾಗಿ ನೈಜ ಹಿಂದುಗಳಿಗೆ, ಅಲ್ಪಸಂಖ್ಯಾತರಿಗೆ ರಸ್ತೆಯಲ್ಲಿ ನಡೆದಾಡಲು ಭಯದ ವಾತಾವರಣ ಸೃಷ್ಟಿಯಾಗಿದೆ. 20 ಪರ್ಸೆಂಟ್ ಹಿಂದುತ್ವವಾದಿಗಳಿಂದ ಹಿಂದು ಸಮುದಾಯ ತಲೆತಗ್ಗಿಸುವ ಕೆಲಸ ಆಗಿದೆ. ಇವತ್ತು ಯಾವ ಸಂಘಟನೆಯಲ್ಲೂ ಇಲ್ಲದ ಅಮಾಯಕನ ಹತ್ಯೆಯಾಗಿದೆ.

ಆತ ಯಾವ ಸಂಘಟನೆಯಲ್ಲೂ ಇರಲಿಲ್ಲ. ಹೊಟ್ಟೆಪಾಡಿಗಾಗಿ ಪಿಕಪ್‌ನಲ್ಲಿ ಜೀವನ ಸಾಗಿಸಿ ಪರಿಸರದಲ್ಲಿ ಎಲ್ಲರ ಜೊತೆ ಅನ್ನೋನ್ಯವಾಗಿದ್ದ. ಆದರೆ ಮನೆಗೆ ಹೊಯ್ದೆ ತರಿಸಿ ವಿಶ್ವಾಸ ದ್ರೋಹ ಮಾಡಿ ಹತ್ಯೆ ಮಾಡಿರುವುದು ಪೂರ್ವಯೋಜಿತವಾಗಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಲು ಕೆಲವು ಹಿಂದುತ್ವವಾದಿಗಳ ಕೃತ್ಯವಾಗಿದೆ. ಅದಕ್ಕೆ ಸರಕಾರವೂ ಬೆಂಬಲ ನೀಡುತ್ತಿದೆ ಎಂಬುದು ಅನಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದವರ ಮೇಲೆ ಪ್ರಕರಣದಾಖಲಾಗಬೇಕು.

ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣದಲ್ಲೂ ಅವರನ್ನು ಸೇರಿಸಬೇಕು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಬರಬೇಕೆಂದು ಎಂದು ಆಗ್ರಹಿಸಿದರು.ಎಜೇಂಸ್ಟ್ಮೆಂಟ್ ರಾಜಕಾರಣ ಮಾಡಿಕೊಂಡು ಬರುತ್ತಿರುವ ಸ್ಪೀಕರ್ ಸಾಹೇಬರಿಂದಾಗಿ ಇವತ್ತು ಜಿಲ್ಲೆಯಲ್ಲಿ ಕೊಲೆಯಂತ ಘಟನೆಗಳು ನಡೆಯುತ್ತಿದೆ. ಜಿಲ್ಲೆಯಲ್ಲಿ ಯಾವುದೇ ಘಟನೆ ನಡೆದರೂ ಕೂಡಾ ಗಡಿಬಿಡಿ ಆಕಂಡ ಅನ್ನುವರು ಅವರು. ಅವರ ಹತ್ತಿರದ ಕ್ಷೇತ್ರದ ವ್ಯಕ್ತಿಯ ಹತ್ಯೆಯಾಗಿದೆ. ನಿಮ್ಮಲ್ಲಿ ಅಧಿಕಾರ ಇದೆ. ಸರಕಾರ ಇದೆ. ಈ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದಕ್ಕಾಗಿ ನಿಮ್ಮ ಕೊಡುಗೆ ಏನು ಎಂದು ಅಶ್ರಫ್ ಕಲ್ಲೇಗ ಅವರು ಪ್ರಶ್ನಿಸಿದರು.

ಸರಕಾರದ ಬಿಟ್ಟಿ ಭಾಗ್ಯ ಬೇಡ. ಮುಸಲ್ಮಾನರಿಗೆ ಕೊಟ್ಟ ಎಲ್ಲಾ ಬಿಟ್ಟಿ ಭಾಗ್ಯ ವಾಪಾಸು ತೆಗೆದುಕೊಳ್ಳಲಿ. ನಮಗೆ ಸೌಹಾರ್ದತಯುತವಾಗಿ ಶಾಂತಿಯುತವಾಗಿ ನೆಮ್ಮದಿಯಿಂದ ಜೀವನ ಮಾಡಲು ಅವಕಾಶ ಮಾಡಿಕೊಡಿ. ನೆಮ್ಮದಿಯ ಬದುಕು ಬೇಕೆಂದು ಕಾಂಗ್ರೆಸ್ ಸರಕಾರವನ್ನು ನಂಬಿ ಮುಸಲ್ಮಾನರು ಸಿದ್ಧರಾಮಯ್ಯ ಅವರಿಗೆ ಮತ ಹಾಕಿದ್ದಾರೆ. ಆದರೆ ಇಲ್ಲಿ ಶಾಂತಿ ಸೌಹಾರ್ದತೆಗೆ ಧಕ್ಕೆಯಾಗಿದೆ. ಈ ರೀತಿ ಆದರೆ ಜಿಲ್ಲೆಯ ಪರಿಸ್ಥಿತಿ ಏನಾಗಬಹುದು ಎಂದು ಅಶ್ರಫ್ ಕಲ್ಲೇಗ ಪ್ರಶ್ನಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮೋನು ಬಪ್ಪಳಿಗೆ, ರಶೀದ್ ಪರ್ಲಡ್ಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *