Breaking
25 Jul 2026, Sat

ಅಮಾಯಕ ರಹೀಮ್ ಹತ್ಯೆಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ನೇರ ಹೊಣೆ: ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಉಮ್ಮರ್ ಕೆ ಎಸ್ ಪ್ರತಿಕ್ರಿಯೆ

ಸುಳ್ಯ :ಅಮಾಯಕ ರಹೀಮ್ ಹತ್ಯೆ ಅತ್ಯಂತ ತೀವ್ರ ಖಂಡನಿಯ!, ಮಾತ್ರವಲ್ಲ ಈ ಘಟನೆಗೆ ನೇರ ಹೊಣೆಯನ್ನು ಸರ್ಕಾರ ಮತ್ತು ಪೊಲೀಸ್ ಇಲಾಖೆ ವಹಿಸಬೇಕು ಎಂದು ವಹಿಸಬೇಕೆಂದು ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಉಮ್ಮರ್ ಕೆ ಎಸ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ನೀಡಿರುವ ಅವರು ಇದು ಪ್ರಚೋದನೆಯಿಂದ ಆದ ಹತ್ಯೆಯಾಗಿದ್ದು ನೈಜ ಆರೊಪಿಗಳೊಂದಿಗೆ ಹತ್ಯೆಗೆ ಪ್ರಚೋದಿಸಿದವರನ್ನು ಕೂಡಲೆ ಬಂಧಿಸಬೇಕು.
ಈ ಹಿಂದೆ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ನಂತರ ಸಾರ್ವಜನಿಕವಾಗಿ ಹಿಂದೂ ಪರ ಸಂಘಟನೆಯ ಮುಖಂಡರು ಮುಸ್ಲಿಂ ಸಮುದಾಯಕ್ಕೆ ಬೆದರಿಕೆ ಹಾಕುತ್ತ, ಸಾರ್ವಜನಿಕ ವೇದಿಕೆಯಲ್ಲಿ ದ್ವೇಷ ಬಾಷಣ ಮಾಡಿ, ಅಮಾಯಕ ಹಿಂದೂ ಯುವಕರನ್ನು ಪ್ರಚೋದಿಸಿದ ಕಾರಣ ಇಂದು ಅಮಾಯಕ ಮುಸ್ಲಿಂ ಯುವಕನ ಹತ್ಯೆಯಾಗಿದೆ.

ದ್ವೇಷ ಬಾಷಣ ಮಾಡಿ ಹತ್ಯೆಗೆ ಪ್ರಚೋದನೆ ನೀಡುವ ಹಿಂದೂ ಸಂಘಟನೆಯ ಮುಖಂಡರ ಮೇಲೆ ದೂರು ದಾಖಲು ಮಾಡಿ ಬಂಧಿಸಲು ಒತ್ತಾಯ ಹೇರಿದರು. ಆದ್ರೆ ಪೊಲೀಸ್ ಇಲಾಖೆ ನಿರ್ಲಕ್ಷ್ಯಮಾಡಿ ಮೌನ ವಹಿಸಿದರಿಂದ ಅಮಾಯಕ ಯುವಕನ ಹತ್ಯೆ ನಡೆದಿದೆ.

ಇನ್ನಾದರೂ ಪೊಲೀಸ್ ಇಲಾಖೆ ತ್ವರಿತ ರೀತಿಯಲ್ಲಿ ನೈಜ ಆರೋಪಿಗಳೊಂದಿಗೆ ಹತ್ಯೆಗೆ ಪ್ರಚೋದಿಸಿದವರನ್ನು ಕೂಡಲೆ ಬಂಧಿಸಲಿ ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *