Breaking
22 Mar 2026, Sun

ಬಾಳ್ತಿಲ ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಬಿಜೆಪಿಗೆ ಜಯ

ಬಂಟ್ವಾಳ : ವಿಧಾನಸಭಾ ಕ್ಷೇತ್ರದ ಬಾಳ್ತಿಲ ಗ್ರಾಮ ಪಂಚಾಯತ್ ಗೆ ಉಪ ಚುನಾವಣೆ ನಡೆದಿದ್ದು,
ಬಿಜೆಪಿ ಬೆಂಬಲಿತ ಅಭ್ಯರ್ಥಿ ನಿತಿನ್ ಕುಮಾರ್ ಗೆ 419 ಮತ, ಕಾಂಗ್ರೆಸ್ ನ ಯೋಗೀಶ್ ಗೆ 187 ಮತ, 5 ಮತ ಅಸಿಂಧು. ನಿತಿನ್ ಕುಮಾರ್ ಗೆ 232 ಮತಗಳ ಅಂತರದ ಜಯ.


ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್ ರವರ ಬೂತ್ ನಲ್ಲೇ ನಡೆದ ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ದೊರೆತಿರುವುದು, ಗ್ರಾಮ ಪಂಚಾಯತ್ ನಲ್ಲಿ ಎಲ್ಲಾ 16 ಬಿಜೆಪಿ ಸದಸ್ಯರು ಆಯ್ಕೆಯಾಗಿರುವುದು ವಿಶೇಷ.


ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಅಣ್ಣು ಪೂಜಾರಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಈ ಉಪ ಚುನಾವಣೆ ನಡೆದಿತ್ತು.


ಮುಂದಿನ ಆರು ತಿಂಗಳ ಅವಧಿಗೆ ಈ ಸದಸ್ಯ ಸ್ಥಾನ ಇರಲಿದೆ. ನಂತರ ಗ್ರಾಮ ಪಂಚಾಯತ್ ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

Leave a Reply

Your email address will not be published. Required fields are marked *