Breaking
25 Jul 2026, Sat

ಕಲ್ಲಡ್ಕ ಫ್ಲೈಓವರ್‌ ಜೂನ್‌ ನಲ್ಲಿ ವಾಹನ ಸಂಚಾರಕ್ಕೆ ಮುಕ್ತ

ಮಂಗಳೂರು : ಕಲ್ಲಡ್ಕ ಫ್ಲೈಓವರ್‌ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು ಜೂನ್‌ನಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಮಹತ್ವದ ಭಾಗವಾದ ಕಲ್ಲಡ್ಕ ಫ್ಲೈಓವರ್‌ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು ಜೂನ್‌ ಮೊದಲ ವಾರದಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಉಪ್ಪಿನಂಗಡಿ, ಮಾಣಿಯ ವೆಹಿಕಲ್‌ ಅಂಡರ್‌ಪಾಸ್‌ಗಳನ್ನು (ವಿಯುಪಿ) ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಸಂಭವವಿದೆ.

ನರಹರಿ ಪರ್ವತ ಬಳಿಯ ಭಾಗದಲ್ಲಿ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದ್ದು, ಚತುಷ್ಪಥ ರಸ್ತೆಯ ಎರಡು ಮಾರ್ಗಗಳು ಸಿದ್ಧಗೊಳ್ಳುತ್ತಿವೆ. ಆದರೆ ಇನ್ನೆರಡು ಮಾರ್ಗಗಳ ಜೊತೆಗೆ ಸರ್ವಿಸ್‌ ರಸ್ತೆ, ರಿಟೇನಿಂಗ್‌ ವಾಲ್‌ ಕಾಮಗಾರಿಗಳು ನಡೆಯಬೇಕಿದೆ.

ಫ್ಲೈಓವರ್‌ನ ಕೂಡು ರಸ್ತೆಗಳು ಎರಡೂ ಕಡೆ (ಫ್ಲೈಓವರ್‌ ಏರುವ ಹಾಗೂ ಇಳಿಯುವ) ಪೂರ್ಣಗೊಂಡಿವೆ. ಫ್ಲೈಓವರ್‌ ನ ಲೋಡ್‌ ಟೆಸ್ಟಿಂಗ್‌ 15 ದಿನಗಳ ಮೊದಲೇ ನಡೆದಿದೆ. ನರಹರಿ ಪರ್ವತ ಮುಂಭಾಗದಲ್ಲಿ ಸುಮಾರು 300 ಮೀಟರ್‌ ಹೆದ್ದಾರಿ ಭಾಗದ ಕೆಲಸ ಆಗಬೇಕಿದೆ. ಹಾಗಾಗಿ ಸದ್ಯ ಒಂದು ಭಾಗ ಕೆಳಗೆ ಸಾಗಿದರೆ, ಇನ್ನೊಂದು ಭಾಗ ಈಗಿರುವಂತೆಯೇ ಫ್ಲೈಓವರ್‌ ಗೆ ಜೋಡಿಸಿಕೊಂಡು ಜೂನ್‌ ಮೊದಲ ವಾರದಲ್ಲಿ ವಾಹನಗಳ ಸಂಚಾರಕ್ಕೆ ತೆರೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *