Breaking
22 Mar 2026, Sun

ಕೊಳತ್ತಮಜಲುವಿನ ಯುವಕ ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣ: ಸುರತ್ಕಲ್‌ನಲ್ಲಿ ಕಿಡಿಗೇಡಿಗಳಿಂದ ಬಸ್‌ಗೆ ಕಲ್ಲು ತೂರಾಟ

ಮಂಗಳೂರು: ಬಂಟ್ವಾಳದ ತಾಲೂಕಿನ ಕೊಳತ್ತಮಜಲುವಿನ ಯುವಕ ಅಬ್ದುಲ್ ರಹಿಮಾನ್ ಕೊಲೆ ಕೃತ್ಯ ಖಂಡಿಸಿ ಜಿಲ್ಲೆಯಾದ್ಯಂತ ಆಕ್ರೋಶ ಜೋರಾಗಿದ್ದು, ಸುರತ್ಕಲ್‌ನಲ್ಲಿ ಬಸ್‌ಗೆ ಕುಲ್ಲು ತೂರಾಟ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಮಂಗಳೂರು, ಸುರತ್ಕಲ್, ಮುಕ್ಕ, ಹಳೆಯಂಗಡಿ, ಪಕ್ಷಿಕೆರೆ, ಕಿನ್ನಿಗೋಳಿ ಮಾರ್ಗವಾಗಿ ಕಟೀಲಿಗೆ ಸಂಚರಿಸುವ ನಂದಿನಿ ಹೆಸರಿನ ಬಸ್‌ಗೆ ಇಂದು ಸುರತ್ಕಲ್ ಸೂರಸ್ ಹೋಟೆಲ್ ಸಮೀಪ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ವಿಕೃತಿ ಮೆರೆದಿದ್ದಾರೆ.

ಇದರಿಂದಾಗಿ ಬಸ್‌ನ ಮುಂಭಾಗದ ಕನ್ನಡಿಗೆ ಹಾನಿಯಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಇದರಿಂದಾಗಿ ಬಸ್ ಸಂಚಾರವನ್ನು ಮೊಟಕುಗೊಳಿಸಲಾಗಿದ್ದು, ಪ್ರಯಾಣಿಕರನ್ನು ಪರ್ಯಾಯ ಬಸ್‌ನಲ್ಲಿ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *