ಬಂಟ್ವಾಳ : ಸಿದ್ದಕಟ್ಟೆ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥ ಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀನಿವಾಸ ನಾಯ್ಕ್ ರವರು ಪದೋನ್ನೋತಿ ಗೊಂಡು ಪ್ರಾಂಶುಪಾಲರಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಹೊಸನಗರ, ಶಿವಮೊಗ್ಗ ಜೆಲ್ಲೆಗೆ ನಿಯುಕ್ತಿಗೊಂಡು ಸೇವೆಗೆ ಹಾಜರಾಗಿದ್ದಾರೆ.
ಸದ್ರಿಯವರು ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ ಯಲ್ಲಿ ಹತ್ತು ವರ್ಷ ಗಳ ಸೇವೆಯೊಂದಿಗೆ ಸಿದ್ದಕಟ್ಟೆ ಪದವಿ ಪೂರ್ವ ಕಾಲೇಜು ನಲ್ಲಿ 22 ವರ್ಷಗಳ ಕಾಲ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಒಟ್ಟಿಗೆ 33 ವರ್ಷ ಗಳಿಂದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿ, ಪೋಷಕರಲ್ಲಿ ಸಾಮಾಜಿಕ ಬದುಕಿನ ಅನುಭವದ ಕೊಂಡಿಯಾಗಿ, ಸಾರ್ವಜನಿಕರಲ್ಲಿ ಉತ್ತಮ ಭಾಂದವ್ಯದ ಸ್ನೇಹಿತರಾಗಿ ಸಹ ಬಾಳ್ವೆ ಹೊಂದಿದ್ದರು.
ಸಿದ್ದಕಟ್ಟೆ ಪರಿಸರದಲ್ಲಿ ಸುದೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿದ ಗುರುಗಳಿಗೆ ಪದೋನ್ನೋತಿ ಗೊಂಡು ಪ್ರಾಂಶುಪಾಲರಾಗಿ ನೇಮಕವಾಗಿರುವುದಕ್ಕೆ ಸಿದ್ದಕಟ್ಟೆ ಪರಿಸರದ ಎಲ್ಲಾ ಶಿಷ್ಯ ವರ್ಗದಲ್ಲಿ ಸಂತಸ ಮೂಡಿ ಬಂದಿದೆ.

ಸಿದ್ದಕಟ್ಟೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಸಮಸ್ತ ಹಳೆ ವಿದ್ಯಾರ್ಥಿಗಳ ಪರವಾಗಿ ಪದವಿ ಪೂರ್ವ ಕಾಲೇಜ್ ಸಿದ್ದಕಟ್ಟೆ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಭಾಕರ ಪ್ರಭು ಅಭಿನಂದನೆ ಸಲ್ಲಿಸಿದ್ದಾರೆ.





