ಬಂಟ್ವಾಳ: ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕುರಿಯಾಳದಲ್ಲಿ ದುಷ್ಕರ್ಮಿಗಳು ವ್ಯಕ್ತಿಯ ಹತ್ಯೆ ಮಾಡಿದ ಹಿನ್ನಲೆಯಲ್ಲಿ ಮೇ.27 ರ ಸಂಜೆಯಿಂದ ಮೇ.30 ರ ಸಂಜೆ 6 ಗಂಟೆವರೆಗೆ ಬಂಟ್ವಾಳ ,ಬೆಳ್ತಂಗಡಿ,ಪುತ್ತೂರು ಕಡಬ,ಮತ್ತು ಸುಳ್ಯ ತಾಲೂಕಿನಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಿ ಅದೇಶ ಹೊರಡಿಸಲಾಗಿದೆ ಎಂದು ತಹಶಿಲ್ದಾರ್ ಅವರ ಪ್ರಕಟನೆ ತಿಳಿಸಿದೆ.

ರಹೀಮ್ ಎಂಬಾತನ ಕೊಲೆಯ ಬಳಿಕ ದ.ಕ.ಜಿಲ್ಲಾ ಪೋಲೀಸ್ ಘಟಕ ವ್ಯಾಪ್ತಿಯಲ್ಲಿ ಪರಿಸ್ಥಿತಿ ಪ್ರಕ್ಷ್ಯುಬ್ದ ವಾತಾವರಣ ಉಂಟಾಗಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವ ಸಾಧ್ಯತೆಗಳು ಇರುವುದರಿಂದ.ಕ.ಜಿಲ್ಲಾ ಪೋಲೀಸ್ ಘಟಕ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಅದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಿರುವುದರಿಂದ ದ.ಕ.ಜಿಲ್ಲಾ ಪೋಲೀಸ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಆದೇಶ ಹೊರಡಿಸಿದೆ.

ನಿಷೇಧಾಜ್ಣೆ ಆದೇಶದಿಂದ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ನಿಷೇಧ. ಮೆರವಣಿಗೆ ಸಭೆಸಮಾರಂಭಕ್ಕೆ ನಿಷೇಧ.ಯಾವುದೇ ಶಸ್ತ್ರ ,ದೊಣ್ಣೆ, ಕತ್ತಿ,ಗದೆ, ಬಂದೂಕು, ಚಾಕು ,ಕೋಲು ಅಥವಾ ಲಾಟಿಗಳನ್ನು,ಅಥವಾ ದೈಹಿಕ ಹಿಂಸೆಯನ್ನು ಉಂಟುಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧ ಮಾಡಲಾಗಿದೆ.


