Breaking
19 Sep 2026, Sat

ಉಕ್ಕಿ ಹರಿಯುತ್ತಿರುವ ಸಂಗಮ ಕ್ಷೇತ್ರ ಪಜಿರಡ್ಕ ಮೃತ್ಯುಂಜಯ ನದಿ

ಬೆಳ್ತಂಗಡಿ:ತಾಲೂಕಿನ ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ ಪಜಿರಡ್ಕ ಮೃತ್ಯುಂಜಯ ನದಿಯಲ್ಲಿ ಮೇ.25 ರಂದು ಸುರಿದ ಭಾರೀ ಮಳೆಗೆ ನೀರಿನ ಮಟ್ಟ ಹೆಚ್ಚಳವಾಗಿದೆ.

ನದಿಯ ನೀರು ಪಜಿರಡ್ಕ ದೇವಸ್ಥಾನದ ಮುಂಭಾಗದ ಮೆಟ್ಟಿಲನ್ನು ಪ್ರವೇಶಿಸಿದೆ.

ಸೇತುವೆಗೆ ಅಡ್ಡಲಾಗಿ ಹಾಕಿದ್ದ ಆಣೆಕಟ್ಟು ತೆಗೆಯದೆ ಇದ್ದ ಕಾರಣ ನೀರಿನ ಮಟ್ಟ ಏರುತ್ತಿರುವುದರಿಂದ ಊರಿನ ಜನರಿಗೆ ಆತಂಕ ಉಂಟಾಗಿದೆ.

ತಕ್ಷಣ ಸಂಬoಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ

Leave a Reply

Your email address will not be published. Required fields are marked *