Breaking
20 Sep 2026, Sun

ಮಡಿಕೇರಿ ಕರಿಂಬಳಪು ಕಾಲೋನಿ ನಿವಾಸಿಗಳಿಗೆ ಬೇಕಿದೆ ಮುಳುಗು ಸೇತುವೆ ಭಾಗ್ಯ

ಕೊಡಗು: ಮಡಿಕೇರಿ ತಾಲೂಕು ಕರಿಕೆ ಗ್ರಾಮದ ಕರಿಂಬಳಪು ಕಾಲೋನಿ ನಿವಾಸಿಗಳಿಗೆ ಸರಿಯಾದ ಸೇತುವೆ ಇಲ್ಲದೆ ಸಂಚರಿಸಲು ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವ್ಯಾಪ್ತಿಯಲ್ಲಿ ಸುಮಾರು 23 ಕುಟುಂಬಗಳಿದ್ದು ಅರಣ್ಯ ಹಕ್ಕು ಪತ್ರಗಳು ಸಿಕ್ಕಿವೆ. ಆದ್ರೆ ಇವರು ತಮ್ಮ ವಾಸ ಸ್ಥಾನಕ್ಕೆ ತಲುಪಬೇಕಾದ್ರೆ ಹೊಳೆ ದಾಟಿ ಸುಮಾರು 2ಕಿ.ಮಿ ಸಾಗಬೇಕು.

ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ವೃದ್ಧರಿಗೆ ಅಂಗವಿಕಲರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಕಳೆದ 20 ವರ್ಷಗಳಿಂದ ಇಲ್ಲಿನ ಸಮಸ್ಯೆಯ ಬಗ್ಗೆ ಗ್ರಾಮಪಂಚಾಯಿತಿ ಹಾಗೂ ಶಾಸಕರ ಗಮನಕ್ಕೆ ತಂದರೂ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಸಂಬಂಧಪಟ್ಟ ಮೇಲಾಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಮುಳುಗು ಸೇತುವೆ ನಿರ್ಮಿಸಿ ಕೊಡಬೇಕು ಎಂದು ಮಾಧ್ಯಮದ ಮೂಲಕ ಅಳಲು ತೋಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *