Breaking
19 Sep 2026, Sat

ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದ ಆರೋಪ- ಬೆಳಾಲು ಗ್ರಾ.ಪಂ ನೀರು ನಿರ್ವಾಹಕ ಶಶಿಧರ್ ವಿರುದ್ಧ ದೂರು

ಬೆಳ್ತಂಗಡಿ : ಸಾಕು ನಾಯಿಯೊಂದರ ವಿಚಾರಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯತ್ ನೀರು ನಿರ್ವಾಹಕರೊಬ್ಬರು ಮಹಿಳೆ ಮತ್ತು ಆಕೆಯ ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು ದೂರು ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮ ಪಂಚಾಯತ್ ನೀರು ನಿರ್ವಾಹಕರಾಗಿರುವ ಶಶಿಧರ್ ಎಂಬವರ ಮೇಲೆ ದೂರು ದಾಖಲಾಗಿದೆ.ಶಶಿಧರ ಎಂಬವರಿಗೆ ಸೇರಿದ ನಾಯಿ ಸ್ಥಳೀಯ ನಿವಾಸಿಯಾಗಿರುವ ಸುಮಿತ್ರಾರವರ ಮನೆಯ ನಾಯಿಯನ್ನು ಕಚ್ಚಿ ಕೊಂದಿತ್ತು ಎನ್ನಲಾಗಿದೆ.

ಈ ವಿಚಾರ ತಿಳಿಸಲು ಸುಮಿತ್ರಾ ಅವರು ತನ್ನ ಮನೆಯ ಎದುರಿನ ರಸ್ತೆಗೆ ಹೋಗಿ ಶಶಿಧರ ಅವರಿಗೆ ತಿಳಿಸಿದ್ದಾರೆ. ಆಗ ಮನೆಯಿಂದ ಹೊರಗೆ ಬಂದ ಶಶಿಧರ ಅವರು ನನ್ನ ನಾಯಿ ನಿಮ್ಮ ನಾಯಿಯನ್ನು ಕೊಂದದ್ದು ಅಲ್ಲ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ ಅಂತ ಹೇಳಲಾಗುತ್ತಿದೆ.

ಅಷ್ಟು ಮಾತ್ರವಲ್ಲದೆ ಮಾನಕ್ಕೆ ಕುಂದು ತರುವ ರೀತಿಯಲ್ಲಿ ಎದೆಗೆ ಕೈ ಹಾಕಿ ದೂಡಿದಾಗ ಕೆಳಗೆ ಬಿದ್ದುದನ್ನು ನೋಡಿದ ಮಕ್ಕಳು ತಕ್ಷಣ ಬಂದು ಮೇಲಕ್ಕೆ ಎತ್ತಿ ಉಪಚರಿಸಿದಾಗ ಶಶಿಧರ್ ಮಕ್ಕಳ ಬಲ ಕೆನ್ನೆಗೆ ಕೈಯಿಂದ ಹೊಡೆದು ಕೈಯಿಂದ ದೂಡಿ ನಿನ್ನ ಮನೆಯಲಿ ಹೆಣ್ಣು ಮಕ್ಕಳೇ ಇರುವುದು ನಿಮ್ಮನ್ನು ಅತ್ಯಾಚಾರ ಮಾಡಿದರೂ ಕೇಳುವವರಿಲ್ಲವೆಂದು ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಸಮಿತ್ರಾರವರು ದೂರು ನೀಡಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *