Breaking
24 Jun 2026, Wed

ಪ್ರಧಾನಿ ಮೋದಿ ಬಗ್ಗೆ ಅವಹೇಳನ: ವ್ಯಕ್ತಿ ಬಂಧನ

ರಾಯಚೂರು : ಭಾರತ – ಪಾಕಿಸ್ತಾನದ ಮಧ್ಯೆ ಯುದ್ಧ ನಡೆಯುತ್ತಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ರಾಫೆಲ್ ವಿಮಾನದ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ವ್ಯಕ್ತಿಯನ್ನು ತುರುವಿಹಾಳ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಸಿಂಧನೂರಿನ ಕೆ. ಹೊಸಳ್ಳಿ ಗ್ರಾಮದ ಅಜ್ಮೀರ್ (37) ಎಂದು ಗುರುತಿಸಲಾಗಿದೆ.

ಈತ ರಾಫೆಲ್ ಯುದ್ಧ ವಿಮಾನ ಹಾಗೂ ಪ್ರಧಾನಿಯ ಫೋಟೋವನ್ನು ಕತ್ತೆಯೊಂದಿಗೆ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ.

ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದನ್ನು ಗಮನಿಸಿದ ನೆಟ್ಟಿಗರು ಈ ಕೂಡಲೇ ದೇಶದ್ರೋಹಿಯನ್ನು ಬಂಧಿಸಿ ತಕ್ಕ ಪಾಠ ಕಲಿಸಬೇಕು ಎಂದು ಆಕ್ರೋಶ ಹೊರಹಾಕಿದ್ದು, ಅದರಂತೆ ಇದೀಗ ತುರುವಿಹಾಳ ಪೊಲೀಸರು ಆರೋಪಿ ಅಜ್ಮೀರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *