ಉಡುಪಿ: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್- 1 ಕ್ಕೆ ಕಂಟಕದ ಮೇಲೆ ಕಂಟಕಗಳು ಎದುರಾಗುತ್ತಿವೆ.
ಇತ್ತ ಕಾಂತಾರ ಬಳಿಕ ಕಾಂತಾರ ಚಾಪ್ಟರ್- 1 ಕೂಡ ಮಾಡಬಾರದು ಎನ್ನುವ ಒತ್ತಾಯಗಳು ಎಲ್ಲ ಕಡೆಯಿಂದಲೂ ಕೇಳಿ ಬಂದಿತ್ತು. ಮಾತ್ರವಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಆಕ್ರೋಶಗಳು ವ್ಯಕ್ತವಾಗಿತ್ತು.
ಇದರ ಬೆನಲ್ಲೇ ಕಾಂತಾರ ಚಾಪ್ಟರ್ 1 ರಲ್ಲಿ ನಟಿಸಿದ್ದ ಕಾಮಿಡಿ ಕಿಲಾಡಿಗಳು ಖ್ಯಾತೀಯ ರಾಕೇಶ್ ಪೂಜಾರಿಯವರು ಮೇ.12ರ ಸೋಮವಾರದಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಸಂದರ್ಭ ಬೆಂಗಳೂರಿನ ಜೀ ಕನ್ನಡ ವಾಹಿನಿಯ ಸಮಸ್ತ ಬಳಗ ಸೇರಿದಂತೆ, ಸ್ನೇಹಿತರು, ಬಂಧು, ಬಳಗ ಎಲ್ಲರೂ ಕೂಡ ಆಗಮಿಸಿ ರಾಕೇಶ್ ಪೂಜಾರಿಯವರ ಅಂತಿಮ ದರ್ಶನ ಮಾಡಿದ್ದಾರೆ.

ಅವರಿಗೆ ತಮ್ಮ ಜೊತೆಗಾರ, ಮನೆ ಮಗ ತಮ್ಮೊಂದಿಗೆ ಇಲ್ಲ ಎನ್ನುವ ಸತ್ಯವನ್ನು ಜೀರ್ಣಿಸಿಕೊಳ್ಳುವುದಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬಹುದು ಗೊತ್ತಿಲ್ಲ. ಆದ್ರೆ ಕಾಂತರಾದ ಚಾಪ್ಟರ್ 1 ಚಿತ್ರದ ನಿರ್ದೇಶಕರಾಗಿದ್ದ ರಿಷಬ್ ಶೆಟ್ಟಿಯವರು ಮಾತ್ರ ಆಗಮಿಸದೆ ಇರುವುದು ಬಹಳಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಈಗ ರಾಕೇಶ್ ಪೂಜಾರಿಯವರ ವಿಚಾರದಲ್ಲಿ ರಿಷಬ್ ಶೆಟ್ಟಿ ಕಾಂತರಾದ ಚಾಪ್ಟರ್- 1ರಲ್ಲಿ ರಾಕೇಶ್ ನಟಿಸಿಲ್ಲ ಅಂತ ಮೀಡಿಯಾ ಮುಂದೆ ಹೇಳಿ ಅಂತ ಮ್ಯಾನೇಜರ್ ಹತ್ರ ಫೋನ್ ಮಾಡಿಸಿದ್ದಾರೆ ಅನ್ನುವ ಹೀಗೊಂದು ಅಂತೆ ಕಂತೆಗಳ ಸುದ್ದಿಗಳು ವೈರಲ್ ಆಗುತ್ತಿದೆ.

ಮಾತ್ರವಲ್ಲ ಟ್ರೋಲ್ ಬಾಹುಬಲಿ ಪೇಜ್ ನಲ್ಲಿ ಈ ಕುರಿತು ಬರೆಯಲಾಗಿದ್ದು ಕಾಂತರದಲ್ಲಿ ರಾಕೇಶ್ ನಟಿಸಿಲ್ಲ ಅಂತ ಮೀಡಿಯಾ ಮುಂದೆ ಹೇಳಿ ಅಂತ ಮ್ಯಾನೇಜರ್ ಹತ್ರ ಫೋನ್ ಮಾಡಿಸಿದ್ದಿ ಅಲ್ವಾ .ನೀನೆಂತ ನಾಯಕ ನಟ ಮಾರಾಯ?. ಅಷ್ಟು ದೊಡ್ಡ ಪ್ರೊಡಕ್ಷನ್ ಹೌಸ್ ಒಂದು ದಿನದ ಶೂಟಿಂಗ್ ನಿಲ್ಲಿಸಿದ್ದರೆ ಏನಾಗುತ್ತಿತ್ತು? ಎಲ್ಲಾ ವಿಷಯದಲ್ಲೂ ಕಮರ್ಷಿಯಲ್ ನೋಡಬೇಡ ವೃಷಭ್ ಶೆಟ್ಟಿ ಮಾನವೀಯತೆಯು ಸ್ವಲ್ಪ ಇರಲಿ ಅನ್ನುವ ಪೋಸ್ಟ್ ವೈರಲ್ ಆಗುತ್ತಿದೆ.
ಈ ಕುರಿತು ರಿಷಬ್ ಶೆಟ್ಟಿಯವರು ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ಮಾಧ್ಯಮಕ್ಕೆ ಕೊಟ್ಟಿಲ್ಲ. ಇನ್ನು ರಾಕೇಶ್ ನಿಧನರಾಗುವುದಕ್ಕೆ ಮುಂಚೆ ಕಾಂತಾರ ಚಾಪ್ಟರ್- 1 ಸೆಟ್ ನಲ್ಲಿದ್ದ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್ ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ರು.

ಈ ಹಿಂದೆ ಆರ್ಟಿಸ್ಟ್ ಗಳಿದ್ದ ಬಸ್ ಅಪಘಾತವಾಗಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ರು.


