✍🏻 ವಿನಯ್ ಕುಮಾರ್ ಅದ್ಯಪಾಡಿ
ಬಂಟ್ವಾಳ: ಜಯರಾಜ್ ಅತ್ತಾಜೆ ಸಾರಥ್ಯದ “ತಾoಬೂಲ ಕಲಾವಿದೆರ್ ಪೂಂಜಾಲಕಟ್ಟೆ” ತಂಡದ ಈ ವರ್ಷದ ಸೂಪರ್ ಹಿಟ್ ನಾಟಕ ವೇ ” ಎಲ್ಲೆ ದಾದ ಏರೆಗ್ ಗೊತ್ತು
ನಿನ್ನೆ ಮಂಗಳೂರಿನ ಪುರ ಭವನ ದಲ್ಲಿ
ರಾಜೇಶ್ ಕಣ್ವೂರ್ ಸಾರಥ್ಯ ದ ಕಣ್ಣೊರು ಬಾಯ್ಸ್ ಡಾನ್ಸ್ ಅಕಾಡೆಮಿ ಮಂಗಳೂರು ಇವರ 29 ನೇ ಸಂಭ್ರಮ ದಲ್ಲಿ ನಡೆದ ತಾoಬೂಲ ಕಲಾವಿದೆರ್ ತಂಡದ ಎಲ್ಲೆ ದಾದ ಏರೆಗ್ ಗೊತ್ತು ನಾಟಕ ಕಲಾಭಿಮಾನಿಗಳ ಮನಸ್ಸನ್ನು ಗೆದ್ದಿದೆ…
ಹೌದು, ರಕ್ಷಿತ್ ರೈ ಪೂಂಜಾಲಕಟ್ಟೆ ಯವರ ಉತ್ತಮ ಕಥೆ ಯೊಂದಿಗೆ, ರಂಗ ಚಾಣಕ್ಯ ರಾಘವೇಂದ್ರಕಾರಂತ್ ಮೊಗರ್ನಾಡ್ ರಚನೆ ಹಾಗೂ ಅತ್ಯುತ್ತಮ ನಿರ್ದೇಶನ ದಲ್ಲಿ ಎಲ್ಲೆ ದಾದ ಏರೆಗ್ ಗೊತ್ತು ನಾಟಕ ಪ್ರತಿಯೊಬ್ಬ ಕಲಾವಿದನ ಮನಸ್ಸನ್ನು ಗೆದ್ದಿದೆ.
ನಾಟಕ ದ ಮೊದಲನೇ ದೃಶ್ಯ ದಿಂದ ಕೊನೆಯ ದೃಶ್ಯ ದವರೆಗೆ ಯಾವ ಪ್ರೇಕ್ಷಕನ ಗಮನವೂ ಬೇರೆಡೆ ಸೆಳೆಯದ ರೀತಿಯಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರ ಶ್ರಮ ಅತ್ಯುತ್ತಮ
ನಾನು ಕಂಡ ಅದೆಷ್ಟೋ ನಾಟಕದಲ್ಲಿ ನಾಟಕ ದ ಕೊನೆಗೆ ಪ್ರೇಕ್ಷಕರು ಕೈ ಚಪ್ಪಾಳೆ ಯ ಆಶೀರ್ವಾದ ಕೊಡುವುದನ್ನು ನೋಡಿದ್ದೇನೆ, ಆದರೆ ಮೊದಲ ಭಾರಿಗೆ ಈ ನಾಟಕದಲ್ಲಿ ಏನೋ ವಿಶೇಷ ನೋಡಿದೆ, ಅದು ಬೇರೇನೂ ಅಲ್ಲ, ಪ್ರತಿಯೊಂದು ದೃಶ್ಯ ದ ಕೊನೆಗೆ ಶೀರ್ಷಿಕೆ ಗೀತೆಯ ಬದಲಿಗೆ ನನ್ನ ಕಣ್ಣಿಗೆ ಬಿದ್ದದ್ದು ಪ್ರೇಕ್ಷಕರ ಕೈ ಚಪ್ಪಾಳೆ ಮಾತ್ರ
ನಿಜವಾದ ರಂಗ ಭೂಮಿ ಕಲಾವಿದನಿಗೆ ಇದಕ್ಕಿಂತ ದೊಡ್ಡ ಸೌಭಾಗ್ಯ ಬೇರೇನೂ ಬೇಕಾಗಿಲ್ಲ.
ನಾಟಕ ದಲ್ಲಿ ಅಭಿನಯಿಸಿದ ಕಲಾವಿದರ ಬಗ್ಗೆ ಹೇಳಲೇ ಬೇಕು, ನಾಟಕ ದ ಮುಖ್ಯ ಪಾತ್ರ ದಲ್ಲಿ ಅದ್ಭುತ ವಾಗಿ ಅಭಿನಯಿಸಿ ಕೊನೆಗೆ ಎಲ್ಲಾ ಪ್ರೇಕ್ಷಕರನ್ನು ಕಣ್ಣೀರಿನಲ್ಲಿ ತೇಲಿಸಿದ ನನ್ನ ಆತ್ಮೀಯ ಗುರುಗಳು ರತ್ನದೇವ್ ಪೂಂಜಾಲಕಟ್ಟೆ ನಿಮ್ಮ ಅಭಿನಯಕ್ಕೆ ದೊಡ್ಡ ಸೆಲ್ಯೂಟ್.
ಜೊತೆಗೆ ಜಯರಾಜ್ ಅತ್ತಾಜೆ, ಮೇಧಾವಿ ಮಡಂತ್ಯಾರ್, ಕಾವ್ಯ ಪೂಜಾರಿ ಹಾಗೂ ಇನ್ನಿತರರ ಅಭಿನಯವೂ ಸೂಪರ್
ಈ ನಾಟಕದಲ್ಲಿ ಹಾಸ್ಯ ವೂ ಸೂಪರ್, ಅಸಂಬದ್ಧ ಯಾವುದೇ ಹಾಸ್ಯ ವನ್ನು ಬಳಸದೆ ಶಿಸ್ತು ಬದ್ದ ಹಾಸ್ಯ ದೊಂದಿಗೆ ಎಲ್ಲಾ ಪ್ರೇಕ್ಷಕರನ್ನು ನಗೆ ಗಡಲಿನಲ್ಲಿ ತೇಲಿಸಿದ ನನ್ನ ಪ್ರೀತಿಯ ಕಲಾವಿದರು ಸುರೇಶ್ ಕೊಯಿಲ, ಸಂದೀಪ್ ಆಚಾರ್ಯ, ಜ್ಯೋತಿ ಕುಲಾಲ್, ಸುರಕ್ಷಾ, ಹಾಗೂ ಇತರರು*
ನಾಟಕದ ಹಿನ್ನೆಲೆ ಸಂಗೀತ ದಲ್ಲಿ ಸಮರ್ಥವಾಗಿ ಸಂಗೀತ ನೀಡಿದವರು ತಂಗವೇಲು ಕೊಯಿಲ,
ಹಾಗೆಯೇ ಧ್ವನಿ ಬೆಳಕಿನ ಸಂಯೋಜನೆ ಯನ್ನು ಉತ್ತಮ ವಾಗಿ ನಿರ್ವಹಿಸಿದವರು ಸುರೇಶ್ ಕುಲಾಲ್ ಹಾಗೂ ಪೂರ್ಣೇಶ್
ನಾಟಕ ದ ಎಲ್ಲಾ ಗೀತೆಗಳು ಕೂಡ ಅದ್ಭುತ, ಹಾಗೆಯೇ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರವರ ಧ್ವನಿ ಯಲ್ಲಿ ಮೂಡಿ ಬಂದ ಗೀತೆ ಯಂತೂ ಅದ್ಭುತ.
ಅತ್ಯುತ್ತಮ ಕಥೆ, ಅತ್ಯುತ್ತಮ ಹಾಸ್ಯ, ಉತ್ತಮ ಸಂದೇಶ ಎಲ್ಲವನ್ನು ಕಂಡ ಈ ವರ್ಷದ ಸೂಪರ್ ಹಿಟ್ ನಾಟಕವೇ
“ಎಲ್ಲೆ ದಾದ ಏರೆಗ್ ಗೊತ್ತು….
ಈ ನಾಟಕ ವು ಇನ್ನಷ್ಟು ಜನಪ್ರಿಯತೆ ಪಡೆಯಲಿ, ಕೇವಲ ನಮ್ಮ ಕರಾವಳಿ ಯಲ್ಲಿ ಮಾತ್ರ ವಲ್ಲದೆ ದೇಶ ವಿದೇಶ ಗಳಲ್ಲಿಯೂ ಪ್ರದರ್ಶನ ಕಾಣಲಿ ಎಂದು ನಾನು ಹಾರೈಸುತ್ತೇನೆ
✍🏻 ವಿನಯ್ ಕುಮಾರ್ ಅದ್ಯಪಾಡಿ




