ಬೆಳ್ತಂಗಡಿ: ತಾಲೂಕಿನ ಆರಂಬೋಡಿ ಗ್ರಾಮದ ಪೂಂಜಾ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಆಯ್ಕೆ ಪ್ರಕ್ರಿಯೆಯು ಇಂದು ನಡೆದಿದ್ದು ಅಧ್ಯಕ್ಷರಾಗಿ ಶ್ರೀಯುತ ಸುದರ್ಶನ್ ಶೆಟ್ಟಿ ಹಕ್ಕೇರಿ ಆಯ್ಕೆಯಾಗಿದ್ದಾರೆ.
ಅರ್ಚಕರುಗಳಾದ ಕೃಷ್ಣಪ್ರಸಾದ್ ಆಸ್ರಣ್ಣ, ಪ್ರಕಾಶ್ ಆಚಾರ್ಯರು ಸಮಿತಿಯಲ್ಲಿದ್ದು ಸದಸ್ಯರಾಗಿ ಅರುಣ್ ಕುಮಾರ್ ಎಂ ಮಂಜಿಲ, ಉಮೇಶ್ ಶೆಟ್ಟಿ ಕೊನೆರೊಟ್ಟು, ಸುಧೀಂದ್ರ ಶೆಟ್ಟಿ ಕಲಾಯಿದಡ್ಡ, ಅಶೋಕ್ ಆಚಾರ್ ಸಿದ್ಧಕಟ್ಟೆ, ರಂಜಿನಿ ದಿವಾಕರ್ ಮದಾಯಿ, ಗೀತಾ ವಿಶ್ವನಾಥ್ ಉಮನೋಟ್ಟು, ಸುರೇಶ್ ನಿರಾಪಲ್ಕೆ ಆಯ್ಕೆಯಾಗಿದ್ದಾರೆ.


