Breaking
14 Sep 2025, Sun

ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಮನೆ ದುರಸ್ತಿ ಶ್ರಮದಾನ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಬಂಟ್ವಾಳ ತಾಲೂಕಿನ ಮಿತ್ತಟ್ಟು ಕಂದಾಡಿ ಮನೆ ಕಾಡಬೆಟ್ಟು ವಗ್ಗ ಸುಂದರಿಯವರ ತೀರಾ ದುರಸ್ತಿಯಲ್ಲಿದ್ದ ಮನೆಯನ್ನು ಶ್ರಮದಾನ ಕಾರ್ಯದ ಮೂಲಕ ರಿಪೇರಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯನಂದ ಪಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ತುಂಗಪ್ಪ ಬಂಗೇರ, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಆದ ಚಂದಪ್ಪ ಕುಲಾಲ್, ಭೇಟಿ ನೀಡಿ ಶ್ರಮದಾನಕ್ಕೆ ಪ್ರೋತ್ಸಾಹಿಸಿದರು.

ಮನೆ ರಿಪೇರಿಗೆ ಬೇಕಾದ ಸಹಕಾರವನ್ನು ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಸಂಪತ್ ಶೆಟ್ಟಿ, ಮಹಾಬಲ ರೈ, ಪ್ರವೀಣ್, ನಾರಾಯಣ್ ಶೆಟ್ಟಿ ಒದಗಿಸಿದ್ದು ಶೌರ್ಯ ತಂಡದ ಸಂಯೋಜಕಿ ರೇಖಾ ಪಿ,ಘಟಕ ಪ್ರತಿನಿಧಿ ಪ್ರವೀಣ್,ಸದಸ್ಯರಾದ ಸಂಪತ್ ಶೆಟ್ಟಿ,ರಮೇಶ,ಶಶಿಕಲಾ, ಪವಿತ್ರ,ಪವಿತ್ರ ಮದ್ವ, ಲಕ್ಷ್ಮಣ್, ಅಶೋಕ್ ಬೋಲ್ಮಾರು,ಅಶೋಕ ಹಾರದ್ದು, ನಾರಾಯಣ್ ಶೆಟ್ಟಿ,ರಮೇಶ್,ವಿನೋದ್, ಪ್ರಿಯಾಂಕ, ಮೋಹನಂದ, ಆನಂದ, ರೋಹಿತ್, ಪ್ರಮೀಳ, ಸ್ಥಳೀಯರಾದ ಸುಂದರ ಮೂಲ್ಯ , ಸುನೀತಾ,ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *