Breaking
29 Sep 2026, Tue

ವಗ್ಗ ವಲಯದ ಮೂರು ಒಕ್ಕೂಟಗಳ ಪದಗ್ರಹಣ ಸಮಾರಂಭ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬಂಟ್ವಾಳ ತಾಲೂಕು ವಗ್ಗ ವಲಯದ ಇರ್ವತ್ತೂರು–ಚೆನ್ನೈತೋಡಿ ‘ಎ’, ‘ಬಿ’ ಹಾಗೂ ಕೊಡಂಬೆಟ್ಟು ಒಕ್ಕೂಟಗಳ ಪದಗ್ರಹಣ ಸಮಾರಂಭ ಸೆ. 27ರಂದು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.


ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಪಾದ ಪಾಂಗಣ್ಣಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಹರೀಂದ್ರ ಪೈ ವಾಮದಪದವು ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಅವರು ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಡಾ. ರಾಮಕೃಷ್ಣ ಎಸ್. ಇರುವತ್ತೂರು, ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ., ಗೋಪಾಲಕೃಷ್ಣ ಚೌಟ ವಾಮದಪದವು, ನವೀನ್ ಚಂದ್ರ ಶೆಟ್ಟಿ ಅಜ್ಜಿಬೆಟ್ಟು, ಅರುಣ್ ಕುಮಾರ್ ಇಂದ್ರ ಅಜ್ಜಿಬೆಟ್ಟು ಬಸದಿ, ಪ್ರಕಾಶ್ ಗಟ್ಟಿ ನಿಸರ್ಗ ಬಸ್ತಿಕೋಡಿ, ಶೇಖರ್ ಪೂಜಾರಿ ಅಗಲ್ದೋಡಿ, ಪ್ರವೀಣ್ ಕಾಡಬೆಟ್ಟು, ವಲಯ ಮೇಲ್ವಿಚಾರಕ ಸುರೇಶ್ ಹಾಗೂ ವಲಯ ಅಧ್ಯಕ್ಷ ಉಮೇಶ್ ಕಾಡಬೆಟ್ಟು ಉಪಸ್ಥಿತರಿದ್ದರು.


ಸಂಘದ ಹಿರಿಯ ಸದಸ್ಯರು, ಹಿರಿಯ ನಾಟಿ ವೈದ್ಯೆ ವೆಂಕಮ್ಮ ಕೊಡಂಬೆಟ್ಟು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ಗಳಾದ ಪ್ರವೀಣ್ ಹಾಗೂ ಪ್ರಕಾಶ್ ಪೂಜಾರಿ, ಸ್ಥಳೀಯ ಲೈನ್ಮ್ಯಾನ್ಗಳು ಮತ್ತು ಭರತನಾಟ್ಯ ನಾಟ್ಯ ವಿದುಷಿ ಸಹನಾ ಶೆಟ್ಟಿ ನರವಲ್ದಡ್ಡ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಸಂಘದ ಸದಸ್ಯರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸುಜ್ಞಾನ ನಿಧಿಯ ಮಂಜೂರಾತಿ ಪತ್ರ ಹಾಗೂ ಸದಸ್ಯರ ಎಲ್ಐಸಿ ವಿಮಾ ಪಾಲಿಸಿಯ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.


ಇದಕ್ಕೂ ಮುನ್ನ ಸಿರಿಗುಂಡದ ಪಾಡಿ ಮಕ್ಕಳ ಕುಣಿತ ಭಜನೆ ಹಾಗೂ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸೌಮ್ಯ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಭಾರತಿ ಶೆಟ್ಟಿ ಒಕ್ಕೂಟಗಳ ವರದಿ ವಾಚಿಸಿದರು. ಚೆನ್ನೈತೋಡಿ ಸೇವಾ ಪ್ರತಿನಿಧಿ ಮಾಧವ ವಂದಿಸಿದರು. ನಿತಿನ್ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸೇವಾ ಪ್ರತಿನಿಧಿಗಳಾದ ಮೋಹನ್ ದಾಸ್ ಗಟ್ಟಿ ಮತ್ತು ತಾರಾನಾಥ ಸಹಕರಿಸಿದರು.

Leave a Reply

Your email address will not be published. Required fields are marked *