ವಾಮದಪದವು: ಸ್ವಚ್ಛತಾ ಪಖ್ವಾಡಾ 2026ರ ಅಂಗವಾಗಿ ವಾಮದಪದವು ಜನೌಷಧಿ ಕೇಂದ್ರದ ಮಾಲಕರಾದ ಮನೋಜ್ ಕುಲಾಲ್ ಅವರ ನೇತೃತ್ವದಲ್ಲಿ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ಪಿಳಿಂಗಾಳ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಆಲ್ಬರ್ಟ್ ಡಿಸೋಜಾ, ಉಪಾಧ್ಯಕ್ಷರಾದ ದಿನೇಶ್ ದಂಬೇದರ್ ಹಾಗೂ ಜನೌಷಧಿಯ ಮಾರ್ಕೆಟಿಂಗ್ ಅಧಿಕಾರಿ ಶಿವಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಸಂಜೀವ ಪೂಜಾರಿ ಅವರು, “ಮಹಾತ್ಮ ಗಾಂಧೀಜಿಯವರ ಸ್ವಚ್ಛತೆಯ ಕನಸು ವಾಮದಪದವಿನಲ್ಲಿ ಸಾಕಾರಗೊಳ್ಳುತ್ತಿದೆ. ದೇವರನ್ನು ಒಲಿಸಿಕೊಳ್ಳಲು ಸ್ವಚ್ಛತೆಯೇ ಸುಲಭ ಮಾರ್ಗ” ಎಂದು ಹೇಳಿದರು.

ಸ್ವಚ್ಛತೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ವಾಮದಪದವು ಜನೌಷಧಿ ಕೇಂದ್ರದ ಮಾಲಕರಾದ ಮನೋಜ್ ಕುಲಾಲ್ ಅವರು ನಿರೂಪಿಸಿದರು


