Breaking
5 Sep 2026, Sat

ಕಣಿಯೂರು: ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕೇಂದ್ರದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ

ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ವಿವಿಧ ದಾನಿಗಳು ಅನ್ನದಾನ ಹಾಗೂ ಆಹಾರ ವಿತರಣೆ ಕಾರ್ಯಕ್ರಮ ಸೆ.04ರಂದು ಹಮ್ಮಿಕೊಂಡರು.

ಪದ್ಮುಂಜ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮಧ್ಯಾಹ್ನದ ಅನ್ನದಾನ ನೆರವೇರಿಸಲಾಯಿತು. ಪ್ರೇಮನಾಥ ಶೆಟ್ಟಿ ಮಲೆಂಗಲ್ಲು ಅವರು ಬೆಳಗಿನ ತಿಂಡಿ ವ್ಯವಸ್ಥೆ ಮಾಡಿದರು. ರಂಜಿತ್ ಪದ್ಮುಂಜ ಹಾಗೂ ಮಹೇಶ್ ಪದ್ಮುಂಜ ಅವರು ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಮತ್ತು ಪಾನೀಯ ವಿತರಿಸಿದರು.

ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಸುನಿತಾ ಅವರು ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ದಾನಿಗಳು, ಪಾಲನಾ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *