Breaking
2 Sep 2026, Wed

ಮುಳಿಯ–ದಂಬೆ: 48 ದಿನಗಳ ಉಚಿತ ಯೋಗಶಿಕ್ಷಣ ಶಿಬಿರದ ನೂತನ ಶಾಖೆ ಉದ್ಘಾಟನೆ

ಮುಳಿಯ–ದಂಬೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ವತಿಯಿಂದ ಆಯೋಜಿಸಿರುವ 48 ದಿನಗಳ ಉಚಿತ ಯೋಗಶಿಕ್ಷಣ ಶಿಬಿರದ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಆ.30ರಂದು ಶ್ರೀ ಅಯ್ಯಪ್ಪ ಸ್ವಾಮಿ ಭಜನಾಮಂದಿರ, ಮುಳಿಯ–ದಂಬೆಯಲ್ಲಿ ನಡೆಯಿತು.

ಜಿಲ್ಲಾ ಸಮಿತಿ, ಜಿಲ್ಲಾ ಸಹ ಸಂಚಾಲಕರು, ನಗರ ಸಂಚಾಲಕರು ಹಾಗೂ ಮುಖ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮವನ್ನು ಆನಂದ ಶೆಟ್ಟಿ ತಾಳಿಪಡ್ಪು ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಯೋಗಬಂಧುಗಳಿಗೆ ಶುಭ ಹಾರೈಸಿದರು.

ಸಮಿತಿಯ ಪರಿಚಯ ಹಾಗೂ ಧ್ಯೇಯೋದ್ದೇಶಗಳನ್ನು ನಗರ ಶಿಕ್ಷಣ ಪ್ರಮುಖ ಮಂಜುನಾಥ್ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೌಭದ್ರೆ ಅವರು ತಮ್ಮ ಯೋಗಾನುಭವಗಳನ್ನು ಹಂಚಿಕೊಂಡು, ಯೋಗಾಭ್ಯಾಸದಿಂದ ದೊರೆಯುವ ಪ್ರಯೋಜನಗಳ ಕುರಿತು ತಿಳಿಸಿದರು.

ಭಜನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ಶಾಖೆಯ ಯೋಗಬಂಧುಗಳಾದ ನಾರಾಯಣ, ರಮೇಶ್, ಜಯಂತಿ, ಲಕ್ಷ್ಮೀ, ಪ್ರಸನ್ನ ಹಾಗೂ ದಯಾನಂದ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಹೊಸ ಯೋಗಬಂಧುಗಳಿಗೆ ಜಯಲಕ್ಷ್ಮೀ ಅವರು ಅಗತ್ಯ ಸೂಚನೆಗಳನ್ನು ನೀಡಿದರು.

ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ನಿರ್ಮಲ ಸ್ವಾಗತಿಸಿದರು. ಗೋಪಾಲಕೃಷ್ಣ ವಂದಿಸಿದರು. ಒಟ್ಟು 89 ಯೋಗಬಂಧುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *