Breaking
2 Sep 2026, Wed

ಮೂಡಬಿದ್ರಿಯಲ್ಲಿ ರಾಜ್ಯಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆ: ಡೋಜೊ ಕೃಷ್ಣಾಪುರದ ಆರು ಮಂದಿಗೆ ಚಿನ್ನದ ಪದಕ

ಮೂಡಬಿದ್ರಿ: ಕರ್ನಾಟಕ ಸ್ಕ್ವೇಯ್ ಸಂಸ್ಥೆಯ ವತಿಯಿಂದ ಆಗಸ್ಟ್ 30ರಂದು ಮೂಡಬಿದ್ರಿಯಲ್ಲಿ ನಡೆದ ರಾಜ್ಯಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಡೋಜೊ ಕೃಷ್ಣಾಪುರದಲ್ಲಿ ತರಬೇತಿ ಪಡೆಯುತ್ತಿರುವ ಆರು ಮಂದಿ ಕ್ರೀಡಾಪಟುಗಳು ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಗಳಾಗಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದಾರೆ.

ಮರಿಯಮ್ ಸುಹ, ಆಯಿಶತುಲ್ ನಾಫಿಯ, ಫಾತಿಮಾ ತನ್ವೀಹ, ಫಾತಿಮತ್ ರಿಫಾತ್, ಮೊಹಮ್ಮದ್ ಮುಜಮ್ಮಿಲ್ ಹಾಗೂ ಸುಲೈಮಾನ್ ಶಾಹಿಲ್ ಚಿನ್ನದ ಪದಕದೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದಾರೆ.

ಈ ಮೂಲಕ ಇವರು ಒಡಿಶಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.

ಕ್ರೀಡಾಪಟುಗಳು ಡೋಜೊ ಕೃಷ್ಣಾಪುರದ ಕೋಚ್ ಸರ್ಫರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರ ಸಾಧನೆಗೆ ಕುಟುಂಬಸ್ಥರು, ತರಬೇತುದಾರರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *