ವಿಟ್ಲ: ವಿಟ್ಲ ಸೀಮೆಯ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವದ ನಡೆಯುತ್ತಿದ್ದು , ಇಂದು ರಾತ್ರಿ ದೇವರ ಮಹಾರಥೋತ್ಸವ ನಡೆಯಲಿದೆ.
ಬೆಳಿಗ್ಗೆ ದರ್ಶನ ಬಲಿ, ರಾಜಾಂಗಣದ ಬಟ್ಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು.ಜಾತ್ರೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನವಾಯಿತು.


ಇಂದು ರಾತ್ರಿ ಮಹಾರಥೋತ್ಸವದ ಮೊದಲು ಅತ್ಯಾಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉರಿಮಜಲು ಮಕ್ಕಳ ತಂಡದಿಂದ ‘ಸ್ವರ ತರಂಗ ‘ ಸುಗಮ ಸಂಗೀತ, ಕು.ದ್ವಿತಿ ಶೆಟ್ಟಿ ಪ್ರಸ್ತುತ ಪಡಿಸುವ ‘ನೃತ್ಯಾರ್ಪಣಂ’ ಹಾಗೂ ವಿಟ್ಲ ಸರಕಾರಿ ಪ್ರೌಢಶಾಲೆಯ ವಠಾರದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಮೂಲ್ಕಿ ಅವರಿಂದ ‘ಬಂಟನ ಬಲಿ ಸುತ್ತು’ ಬಯಲಾಟ ಪ್ರದರ್ಶನಗೊಳ್ಳಲಿದೆ.
ಸೋಮವಾರ ರಾತ್ರಿ ದೇವಸ್ಥಾನದಲ್ಲಿ ದೇವರ ನಿತ್ಯ ಬಲಿ ಉತ್ಸವ ನಡೆಯಿತು. ಆ ಬಳಿಕ ಆಕರ್ಷಕವಾದ ಹೂ ತೇರು ಉತ್ಸವ ನಡೆಯಿತು.ಸಾಂಸ್ಕೃತಿಕ ವೇದಿಕೆಯಲ್ಲಿ ವಿಆರ್ ಸಿ ವಿಟ್ಲ ಪ್ರಾಯೋಜಕತ್ವದಲ್ಲಿ ‘ವಿಟ್ಲೋತ್ಸವ’ -2025 ನಡೆಯಿತು. ವಾದ್ಯ ಸಂಗೀತ, ಸಭಾ ಕಾರ್ಯಕ್ರಮದ ಬಳಿಕ ‘ಲಕುಮಿ ಕಲಾ ತಂಡ’ದಿಂದ ‘ಒರಿಯಾಂಡಲಾ ಸರಿ ಬೋಡು’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.




