Breaking
10 Oct 2026, Sat

ಇನ್ನರ್ ವೀಲ್ ಮಂಗಳೂರು ದಕ್ಷಿಣ ವತಿಯಿಂದ ನರಿಕೊಂಬು ಪ್ರಾಥಮಿಕ ಶಾಲೆಗೆ ಅಕ್ಷರ ದಾಸೋಹ ಸಾಮಗ್ರಿ ದೇಣಿಗೆ

ಬಂಟ್ವಾಳ: ಇನ್ನರ್ ವೀಲ್ ಕ್ಲಬ್ ಮಂಗಳೂರು ದಕ್ಷಿಣ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿನ ಮಕ್ಕಳ ಬಿಸಿಯೂಟ ಯೋಜನೆಗೆ ಅಗತ್ಯವಿರುವ ಅನ್ನ ಬಡಿಸುವ ಟ್ರೋಲಿ, ಸಾಂಬಾರ್ ಬಡಿಸುವ ಟ್ರೋಲಿ ಹಾಗೂ ಅಕ್ಷರ ದಾಸೋಹಕ್ಕೆ ಬೇಕಾದ ದಿನಸಿ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಲಾಯಿತು.


ಕ್ಲಬ್ ಅಧ್ಯಕ್ಷೆ ಕಲಾವತಿ ಅವರು ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಕೆ. ಅವರಿಗೆ ಸಾಮಗ್ರಿಗಳನ್ನು ಹಸ್ತಾಂತರಿಸಿ ಮಾತನಾಡಿ, “ಮಕ್ಕಳ ಶಿಕ್ಷಣದ ಜೊತೆಗೆ ಅವರ ಆರೋಗ್ಯವೂ ಮುಖ್ಯ. ಸ್ವಚ್ಛವಾಗಿ ಮತ್ತು ಸುಲಭವಾಗಿ ಬಿಸಿ ಊಟ ಬಡಿಸಲು ಈ ಟ್ರೋಲಿಗಳು ಸಹಾಯವಾಗಲಿವೆ” ಎಂದರು.


ಕಾರ್ಯಕ್ರಮದಲ್ಲಿ ಕ್ಲಬ್ ಪದಾಧಿಕಾರಿಗಳಾದ ನಂದಿನಿ ರಘುಚಂದ್ರ, ಗೀತಾ ಡಿ. ಅಮೀನ್, ಶಬರಿ ಭಂಡಾರಿ, ಮಾಲತಿ ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *