ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಬಂಟ್ವಾಳ ತಾಲೂಕು ಘಟಕಕ್ಕೆ ನೂತನ ಶೌರ್ಯ ಮಾಸ್ಟರ್ ಹಾಗೂ ಶೌರ್ಯ ಕ್ಯಾಪ್ಟನ್ ಅವರನ್ನು ನರಿಕೊಂಬು ಶ್ರೀ ಭಯಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆ.13ರಂದು ಆಯ್ಕೆ ಮಾಡಲಾಯಿತು.

ಬಂಟ್ವಾಳ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ತರಬೇತಿ ಕಾರ್ಯಾಗಾರದ ಸಂದರ್ಭದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ತಾಲೂಕಿನ ನೂತನ ಶೌರ್ಯ ಮಾಸ್ಟರ್ ಆಗಿ ಪ್ರವೀಣ್ ಕಾಡಬೆಟ್ಟು ಹಾಗೂ ಶೌರ್ಯ ಕ್ಯಾಪ್ಟನ್ ಆಗಿ ಜಗದೀಶ್ ಆಚಾರ್ಯ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ಕಮಾಂಡರ್ ಶಾಂತಿಲಾಲ್ ಜಟಿಯಾ, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಡಿ., ಶೌರ್ಯ ಯೋಜನಾಧಿಕಾರಿ ಜೈವಂತ್ ಪಟಗಾರ, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ., ತಾಲೂಕು ಶೌರ್ಯ ಸಮಿತಿಯ ಮಾಸ್ಟರ್ ಕೃಷ್ಣಪ್ಪ ಕುಲಾಲ್, ಕ್ಯಾಪ್ಟನ್ ಪ್ರಕಾಶ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




