Breaking
23 Jul 2026, Thu

ಕೊಲ್ಲೂರಿನ ಖಾಸಗಿ ವಸತಿ ಗೃಹದಲ್ಲಿ ಮಹಿಳೆ ನೇಣಿಗೆ ಶರಣು

ಕೊಲ್ಲೂರು: ಕೊಲ್ಲೂರಿನ ಖಾಸಗಿ ವಸತಿ ಗೃಹವೊಂದರಲ್ಲಿ ತಂಗಿದ್ದ ಕೇರಳದ ಕೊಟ್ಟಾಯಂ ಮೂಲದ ಧನ್ಯಶ್ರೀ ಎನ್. (35) ಅವರು ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಜುಲೈ 21ರಂದು ದೂರುದಾರ ಶಿವಮೊಗ್ಗದ ಗುರುಕುಮಾರ್ ಹಾಗೂ ವಸತಿ ಗೃಹದ ಸಿಬ್ಬಂದಿ ಕೊಠಡಿಯ ಬಾಗಿಲು ತಟ್ಟಿ ಕರೆದರೂ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡು ಹಿಂಬದಿಯ ಕಿಟಕಿಯಿಂದ ಪರಿಶೀಲಿಸಿದಾಗ, ಧನ್ಯಶ್ರೀ ಅವರು ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಘಟನೆ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *