Breaking
7 Sep 2026, Mon

ಆರಂಬೋಡಿಯಲ್ಲಿ 41ನೇ ವರ್ಷದ ಮೊಸರು ಕುಡಿಕೆ ಉತ್ಸವಕ್ಕೆ ಸಿದ್ಧತೆ; ಅಧ್ಯಕ್ಷರಾಗಿ ಪ್ರಣೀತ್ ಹಿಂಗಾನಿ ಆಯ್ಕೆ

ಬೆಳ್ತಂಗಡಿ: ಹಿಂದೂ ಜಾಗರಣ ವೇದಿಕೆ ಆರಂಬೋಡಿ–ಎಲಿಯಾನಗೂಡು ಇದರ ಆಶ್ರಯದಲ್ಲಿ ನಡೆಯಲಿರುವ 41ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಉತ್ಸವ ಸಮಿತಿಯನ್ನು ರಚಿಸಿ, ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಪ್ರಗತಿಪರ ಕೃಷಿಕರಾದ ಕಿರಣ್ ಕುಮಾರ್ ಮಂಜಿಲ, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಹಾಗೂ ನರಸಿಂಹ ಪೈ ಮಾವಿನಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.

ಉತ್ಸವ ಸಮಿತಿಯ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ ಅವರ ಆಪ್ತ ಸಹಾಯಕ, ಸಾಮಾಜಿಕ ಕ್ಷೇತ್ರದ ಮುಂಚೂಣಿ ಸಂಘಟಕರಾದ ಪ್ರಣೀತ್ ಹಿಂಗಾನಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಯುವ ಸಂಘಟಕ ನಿತೇಶ್ ಕುಮಾರ್ ಹನ್ನೆರಡುಕವಲು, ಕೋಶಾಧಿಕಾರಿಯಾಗಿ ಸಂಘಟಕ ಸುಧಾಮ ಉಪ್ಪಿರ ಅವರನ್ನು ನೇಮಕ ಮಾಡಲಾಗಿದ್ದು, ವಿವಿಧ ಜವಾಬ್ದಾರಿಗಳಿಗೆ ಇತರ ಸದಸ್ಯರನ್ನು ಸಹ ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವವನ್ನು ಧಾರ್ಮಿಕ ಶ್ರದ್ಧೆ, ಸಾಂಸ್ಕೃತಿಕ ವೈಭವ ಹಾಗೂ ಜನಸಹಭಾಗಿತ್ವದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು. ಉತ್ಸವವನ್ನು ಯಶಸ್ವಿಗೊಳಿಸಲು ಸಮಿತಿಯ ಎಲ್ಲ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರ ಅಗತ್ಯವೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

Leave a Reply

Your email address will not be published. Required fields are marked *