ಬಂಟ್ವಾಳ: ದಿನಾಂಕ 27/12/24ರಂದು ನಡೆಯಬೇಕಿದ್ದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ದೇವಶ್ಯ ಮುಡೂರು ಇದರ ಶಾಲಾ ವಾರ್ಷಿಕೋತ್ಸವ ಜ. 2 ಕ್ಕೆ ಮುಂದೂಡಿಕೆಯಾಗಿದೆ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧಾನರಾದ ಹಿನ್ನೆಲೆ ಇಂದು ನಡೆಯಬೇಕಿದ್ದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ದೇವಶ್ಯ ಮುಡೂರು ಇದರ ಶಾಲಾ ವಾರ್ಷಿಕೋತ್ಸವ ಜ. 2 ಕ್ಕೆ ಮುಂದೂಡಿಕೆಯಾಗಿದೆ.
ಸರ್ಕಾರ ರಜೆ ಘೋಷಿಸಿದರ ಜೊತೆಗೆ 7 ದಿನಗಳ ಕಾಲ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧಿಸಿ ಶೋಕಾಚಾರಣೆಗೆ ಆದೇಶಿಸಿದ ಕಾರಣದಿಂದಾಗಿ ನಿಗದಿಯಾಗಿದ್ದ ಶಾಲಾ ವಾರ್ಷಿಕೋತ್ಸವ ಮುಂದೂಡಿಕೆಯಾಗಿದ್ದು ಜನವರಿ 2 ರಂದು ನಡೆಯಲಿದ್ದು, ಪೋಷಕರು, ವಿದ್ಯಾರ್ಥಿಗಳು ಸಹಕರಿಸಬೇಕೆಂದು ಶಾಲಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ವಿನಂತಿಸಿದೆ.



