ಕಲ್ಲಡ್ಕ: ಪೂರ್ವ ಪ್ರಾಥಮಿಕ ಹಂತವು ಶಿಕ್ಷಣದ ಮೊದಲ ಮೆಟ್ಟಿಲಾಗಿದ್ದು, ಈ ಹಂತದಲ್ಲಿ ಪಡೆದ ಶಿಕ್ಷಣವು ಮಕ್ಕಳ ಭವಿಷ್ಯದ ತಳಹದಿಯಾಗಿರುತ್ತದೆ ಎಂದು ಕಲ್ಲಡ್ಕ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ಹೇಳಿದರು.

ಅವರು ಸರಕಾರಿ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ ಮತ್ತು ಯುಕೆಜಿ) ಮಕ್ಕಳಿಗೆ ಸರ್ಕಾರದಿಂದ ನೀಡಲಾದ ಪಠ್ಯಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಆಟದ ಜೊತೆಗೆ ಪಾಠ ಕಲಿಸುವುದರ ಮಹತ್ವವನ್ನು ವಿವರಿಸಿದ ಅವರು, ಪಠ್ಯಪುಸ್ತಕಗಳ ಉಪಯೋಗ ಹಾಗೂ ಅವುಗಳನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿ ಬಳಸುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ, ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ., ಶಿಕ್ಷಕ ಅಹ್ಮದ್ ತೌಸೀಫ್, ಪೂರ್ವ ಪ್ರಾಥಮಿಕ ತರಗತಿ ಶಿಕ್ಷಕಿಯರಾದ ಪಲ್ಲವಿ, ಸುಷ್ಮ ಹಾಗೂ ಆಯಾ ಮೀನಾಕ್ಷಿ ಉಪಸ್ಥಿತರಿದ್ದರು.


