Breaking
4 Aug 2026, Tue

17ರ ಬಾಲಕ ಕಾಲೇಜು ಆವರಣದಲ್ಲಿ ಕುಸಿದು ಬಿದ್ದು ಸಾವು; ಹೃದಯಾಘಾತ ಶಂಕೆ

ಮೈಸೂರು: ಬದುಕಿ ಬಾಳಬೇಕಿದ್ದ 17 ವರ್ಷದ ಬಾಲಕನೊಬ್ಬ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿಯಂತೆ, ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಮೃತ ಬಾಲಕನನ್ನು ಮಾದೇಶ್ (17) ಎಂದು ಗುರುತಿಸಲಾಗಿದೆ. ಈತ ಕಳೆದ ಎರಡು ವರ್ಷಗಳಿಂದ ಪಿಜಿಯೊಂದರಲ್ಲಿ ವಾಸವಾಗಿದ್ದು, ಮೈಸೂರಿನ ಈತ ಮರಿಮಲ್ಲಪ್ಪ ಕಾಲೇಜಿ ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.

ಕಾಲೇಜು ಕ್ಯಾಂಪಸ್ನಲ್ಲಿದ್ದ ವೇಳೆ ಮಾದೇಶ್ ಏಕಾಏಕಿ ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ಕಾಲೇಜಿನ ಶಿಕ್ಷಕರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
ಓದಿನಲ್ಲಿ ಮುಂದಿದ್ದ ಮಾದೇಶ್ನ ಅಕಾಲಿಕ ನಿಧನದಿಂದ ಕಾಲೇಜು ಆವರಣದಲ್ಲಿ ದುಃಖದ ವಾತಾವರಣ ಮಡುಗಟ್ಟಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಕಣ್ಣೀರಿನ ವಾತಾವರಣ ಸೃಷ್ಟಿಸಿದೆ.

Leave a Reply

Your email address will not be published. Required fields are marked *