Breaking
17 Jun 2026, Wed

ದ.ಕ.ಜಿ.ಪಂ.ಕಿ.ಪ್ರಾ. ಶಾಲೆ ಏಮಾಜೆ: ಸಂಭ್ರಮದ ‘ಸೃಜನೋತ್ಸವ – 2026’ ವಿನೂತನ ಕಾರ್ಯಕ್ರಮ

ಮಾಣಿ: ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರತರಲು ಹಾಗೂ ಅವರ ಕನಸುಗಳ ಸಾಕಾರಕ್ಕಾಗಿ ಸಂತಸದಾಯಕ ಕಲಿಕಾ ವಾತಾವರಣ ಅತ್ಯಗತ್ಯ” ಎಂದು ಬಂಟ್ವಾಳ ಬಿ.ಐ.ಆರ್.ಟಿ. ಸುರೇಖಾ ಏರವಾಳ ಅಭಿಪ್ರಾಯಪಟ್ಟರು.

ಅವರು ಬಂಟ್ವಾಳ ತಾಲೂಕಿನ ನೆಟ್ಲಾ ಮುಡ್ಡೂರು ಗ್ರಾಮದ ದ. ಕ. ಜಿ. ಪಂ. ಕಿರಿಯ ಪ್ರಾಥಮಿಕ ಶಾಲೆ ಏಮಾಜೆ ಇಲ್ಲಿ ಜೂನ್ 16, ಮಂಗಳವಾರದಂದು ಹಮ್ಮಿಕೊಳ್ಳಲಾಗಿದ್ದ ಸೃಜನೋತ್ಸವ -2026’ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅವರು ಶಾಲೆಯ ಮಹತ್ವಾಕಾಂಕ್ಷೆಯ ದ್ವಿ-ಭಾಷಾ ಮಾಧ್ಯಮಕ್ಕೂ ಚಾಲನೆ ನೀಡಿದರು.

ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ವೃಕ್ಷೋತ್ಸವ:

ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಸರ್ವತೋಮುಖ ಬೆಳವಣಿಗೆಗಾಗಿ ಹಮ್ಮಿಕೊಳ್ಳಲಾದ ಹತ್ತಾರು ಯೋಜನೆಗಳಿಗೆ ಗಣ್ಯರು ಚಾಲನೆ ನೀಡಿದರು:
ಅಕ್ಷಯ ಪಾತ್ರೆ ಉದ್ಘಾಟನೆ: ರಮೇಶ್ ಪೂಜಾರಿ ಸೂರ್ಯ ಇವರಿಂದ ನೆರವೇರಿತು.

ಜ್ಞಾನ ವಾಹಿನಿ – 2026 ಚಾಲನೆ: ಜಯಲಕ್ಷ್ಮಿ ಈಶ್ವರ ಭಟ್ ಅವರು ಜ್ಞಾನ ವಾಹಿನಿ ಯೋಜನೆಗೆ ಚಾಲನೆ ನೀಡಿದರು.
ಯುವ ವೃಕ್ಷೋತ್ಸವ (ಪರಿಸರ ದಿನಾಚರಣೆ): ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಸಾಯಿ ಕೊಡಾಜೆ ಅವರ ನೇತೃತ್ವದಲ್ಲಿ, ಘಟಕದ ವತಿಯಿಂದ ‘ಯುವ ವೃಕ್ಷೋತ್ಸವ’ದ ಅಂಗವಾಗಿ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ವಿದ್ಯಾರ್ಥಿಗಳಿಗೆ ಉಚಿತ ಪರಿಕರಗಳ ವಿತರಣೆ:
ಮಕ್ಕಳ ಶೈಕ್ಷಣಿಕ ಉತ್ತೇಜನಕ್ಕಾಗಿ ದಾನಿಗಳ ಸಹಕಾರದೊಂದಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು:
ಸಮವಸ್ತ್ರ ವಿತರಣೆ: ಮಾಜಿ ಜನಪ್ರತಿನಿಧಿಗಳಾದ ಸಮಿತ ಡಿ. ಪೂಜಾರಿ ಹಾಗೂ ಧನಂಜಯ ಗೌಡ ಅವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.

ಉಚಿತ ನೋಟ್ ಪುಸ್ತಕ ವಿತರಣೆ: ಉರ್ದಿಲ ಗುತ್ತು ರಾಮ್ ಪ್ರಸಾದ್ ರೈ ಇವರ ಕೊಡುಗೆಯಾಗಿದ್ದ ಉಚಿತ ನೋಟ್ ಪುಸ್ತಕಗಳನ್ನು ನಿರಂಜನ್ ರೈ ಕುರ್ಲೆತ್ತಿಮಾರು ಅವರು ಮಕ್ಕಳಿಗೆ ವಿತರಿಸಿದರು.

ಉಚಿತ ಟೈ, ಐಡಿ ಕಾರ್ಡ್, ಬೆಲ್ಟ್ ವಿತರಣೆ: ದತ್ತ ಕೃಪಾ ಮಾಣಿಯ ಸದಾಶಿವ ಶೆಟ್ಟಿ ಅವರ ಕೊಡುಗೆಯಾಗಿದ್ದ ಟೈ, ಐಡಿ ಕಾರ್ಡ್ ಮತ್ತು ಬೆಲ್ಟ್‌ಗಳನ್ನು ರಾಜನಾರಾಯಣ ಭಟ್ ಅವರು ವಿತರಿಸಿದರು.

ಶಾಲಾ ಮಂತ್ರಿಮಂಡಲದ ಪದವಿ ಪ್ರದಾನ:
ಇದೇ ಸುಸಂದರ್ಭದಲ್ಲಿ ಶಾಲಾ ಸಾಲಿನ ನೂತನ ವಿದ್ಯಾರ್ಥಿ ಸಂಸತ್ತಿನ (ಮಂತ್ರಿಮಂಡಲ) ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ರಾಜನಾರಾಯಣ ಭಟ್ ಅವರು ನೂತನ ಮಂತ್ರಿಮಂಡಲಕ್ಕೆ ಪದವಿ ಪ್ರದಾನ ಮಾಡಿದರು.

ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಮಲ್ಲಿಕಾ ಗಣೇಶ್ ಆಚಾರ್ಯ, ಉಪಾಧ್ಯಕ್ಷರಾದ ಹರೀಶ್ ಮೂಲ್ಯ, ಶಾಲಾ ಅಕ್ಷರ ರತ್ನ ಪ್ರಶಸ್ತಿ ಪುರಸ್ಕೃತ ಚಿನ್ನಾ ಕಲ್ಲಡ್ಕ, ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ, ಸಹ ಶಿಕ್ಷಕರಾದ ಉದಯ ಚಂದ್ರ ಕೆ.ಎಸ್., ಹಾಗೂ ಗೌರವ ಶಿಕ್ಷಕಿ ಅಕ್ಷತಾ ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು, ವಿದ್ಯಾರ್ಥಿ ಪೋಷಕರು, ವಿದ್ಯಾಭಿಮಾನಿಗಳು ಹಾಗೂ ವಿದ್ಯಾರ್ಥಿ ವೃಂದದವರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

Leave a Reply

Your email address will not be published. Required fields are marked *