ಪಳ್ಳಿಕೆರೆ: ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯ ಪಳ್ಳಿಕೆರೆ ಕಡಲತೀರದಲ್ಲಿ ಸ್ನಾನಕ್ಕೆ ಇಳಿದ ವೇಳೆ ಸಮುದ್ರ ಪಾಲಾಗಿದ್ದ ಇಬ್ಬರು ಯುವಕರ ಮೃತದೇಹಗಳು ಸೋಮವಾರ ತೃಕರಿಪುರ ಹೊಳೆ ಸಮೀಪ ಪತ್ತೆಯಾಗಿವೆ.
ಮೃತರನ್ನು ಚಂಗನಶೇರಿ ನಿವಾಸಿಗಳಾದ ಅಂಕಿತ್ (20) ಹಾಗೂ ಅಬ್ರಹಾಂ (20) ಎಂದು ಗುರುತಿಸಲಾಗಿದೆ.

ಭಾನುವಾರ ಪಳ್ಳಿಕೆರೆ ರೆಡ್ ಮೂನ್ ಬೀಚ್ ಸಮೀಪ ಅಂಕಿತ್ ಮತ್ತು ಅಬ್ರಹಾಂ ಅವರು ತಮ್ಮ ಸ್ನೇಹಿತರಾದ ಅಲನ್ ಸೋನಿ ಹಾಗೂ ದೇವಸ್ಯ ಬೈಜು ಅವರೊಂದಿಗೆ ಸಮುದ್ರದಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು.
ಘಟನೆ ಬಳಿಕ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಬೇಕಲ ಕೋಸ್ಟಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.







