ಪಾಣೆಮಂಗಳೂರು: ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆಯ 21ನೇ ಸಂಪರ್ಕ ಸಭೆಯು ಪಾಣೆಮಂಗಳೂರಿನ ಶಾರದ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಕನ್ನಡ ಪಂಡಿತರಾದ ಕೆದ್ಲಾ ಪರಮೇಶ್ವರ ರಾವ್ ಅವರ ನಿವಾಸದಲ್ಲಿ ಅಂಗಸಂಸ್ಥೆಯ ಅಧ್ಯಕ್ಷ ಕೋರ್ಯ ರಮೇಶ್ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಅಷ್ಟೋತ್ತರ ಶತನಾಮಾವಳಿ, ಶ್ರೀ ವಿಷ್ಣು ಸಹಸ್ರನಾಮ, ಮಂತ್ರಪುಷ್ಪ ಪಠಣ ಹಾಗೂ ಹರಿನಾಮ ಸಂಕೀರ್ತನೆಯನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು.

ಸಭೆಯಲ್ಲಿ ಕೂಟ ಬ್ರಾಹ್ಮಣ ಸಮುದಾಯದ ವಿವಾಹ ಸಂಪರ್ಕ ವ್ಯವಸ್ಥೆಯನ್ನು ಸಂಘಟಿತವಾಗಿ ರೂಪಿಸುವ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಈ ವ್ಯವಸ್ಥೆಯ ಮೂಲಕ ಸಮುದಾಯದ ಯುವಜನರಿಗೆ ವಿವಾಹ ಸಂಬಂಧಗಳ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸುವ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿ ಸಜೀಪ ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್, ಗುರು ಗಾಯತ್ರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಆನಂದ ಸೋಮಯಾಜಿ, ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಶ್ರೀನಿವಾಸ ಹೊಳ್ಳ ಎಂ., ಗೌರವಾಧ್ಯಕ್ಷ ಎ. ಜಯಶಂಕರ ಬಾಸ್ರಿತ್ತಾಯ, ಕಾರ್ಯದರ್ಶಿ ರಾಮಕೃಷ್ಣ ರಾವ್ ಎಂ., ಜತೆ ಕಾರ್ಯದರ್ಶಿ ಎ. ರವಿಶಂಕರ ಮಯ್ಯ, ಮಹಿಳಾ ವೇದಿಕೆ ಅಧ್ಯಕ್ಷೆ ಯಮುನಾ ಐಗಳ್ ಹಾಗೂ ಪಯಣ ಟೂರ್ಸ್ ಮುಖ್ಯಸ್ಥ ಹರೀಶ್ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಭೆಯು ಸಮುದಾಯದ ಐಕ್ಯತೆ, ಧಾರ್ಮಿಕ ಚಟುವಟಿಕೆಗಳು ಹಾಗೂ ಸಾಮಾಜಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆಗಳಿಗೆ ಸಾಕ್ಷಿಯಾಯಿತು.


