Breaking
15 Jun 2026, Mon

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಅನಂತ್ ಅಂಬಾನಿ ಭೇಟಿ

ಉಡುಪಿ: ಪ್ರಸಿದ್ಧ ಉದ್ಯಮಿ ಅನಂತ್ ಅಂಬಾನಿ ಅವರು ಭಾನುವಾರ ರಾತ್ರಿ ಉಡುಪಿಯ ಪವಿತ್ರ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉಡುಪಿಗೆ ಆಗಮಿಸಿದ ಅನಂತ್ ಅಂಬಾನಿ, ಶ್ರೀಕೃಷ್ಣನ ಸನ್ನಿಧಿಯಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಅವರಿಂದ ಫಲ-ಮಂತ್ರಾಕ್ಷತೆ ಸ್ವೀಕರಿಸಿ ಆಶೀರ್ವಾದ ಪಡೆದರು.

ದೇವರ ದರ್ಶನದ ವೇಳೆ ಶಿರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಪಂಡಿತ್ ಚಂದ್ರಶೇಖರ ಶರ್ಮ, ಕರ್ನಾಟಕದ Reliance Jio ವ್ಯವಸ್ಥಾಪಕ ಧನಂಜಯ ಆರ್. ಸೇರಿದಂತೆ ಶಿವನಂದನ, ಮಾಧವ ಶಾನುಭಾಗ್, ಜಯಪ್ರಕಾಶ್ ಶೆಟ್ಟಿ ಹಾಗೂ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.

ಅನಂತ್ ಅಂಬಾನಿ ಅವರ ಭೇಟಿ ಹಿನ್ನೆಲೆಯಲ್ಲಿ ಶ್ರೀ ಕೃಷ್ಣ ಮಠದಲ್ಲಿ ಭಕ್ತರ ಗಮನ ಸೆಳೆಯುವಂತ ವಾತಾವರಣ ನಿರ್ಮಾಣವಾಗಿದ್ದು, ದೇವರ ದರ್ಶನ ಪಡೆದು ಅವರು ತಮ್ಮ ಆಧ್ಯಾತ್ಮಿಕ ಪ್ರವಾಸವನ್ನು ಮುಂದುವರಿಸಿದರು.

Leave a Reply

Your email address will not be published. Required fields are marked *