Breaking
13 Jun 2026, Sat

ಬಂಟ್ವಾಳ: ಸಾಮೂಹಿಕ ಶತರುದ್ರ ಪಾರಾಯಣ ಸಂಪನ್ನ

ಬಂಟ್ವಾಳ: ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಅಧಿಕಮಾಸದ ಪರ್ವಕಾಲದಲ್ಲಿ ಹಾಗೂ ಪ್ರತಿ ತಿಂಗಳ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯ ಸಂಧ್ಯಾಕಾಲದ ಪ್ರದೋಷ ಪುಣ್ಯಕಾಲದಲ್ಲಿ ಕೆಳಗಿನ ವಗ್ಗ ಆಲಂಪುರಿಯ ಎ. ರವಿಶಂಕರ ಮೈಯ್ಯ ಅವರ ನಿವಾಸದಲ್ಲಿ ಸಾಮೂಹಿಕ ಶತರುದ್ರ ಪಾರಾಯಣ, ಗಣಪತಿ ಸೂಕ್ತ, ದೇವಿ ಸೂಕ್ತ, ಆಗಮರ್ಶಣ ಸೂಕ್ತ ಹಾಗೂ ಮಂತ್ರಪುಷ್ಪ ಪಠಣ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೀತಾರಾಮ ಮೈಯ್ಯ, ಮಣಿನಾಲ್ಕೂರು ಪ್ರಾಥಮಿಕ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ರಾಧಾಕೃಷ್ಣ ಮೈಯ್ಯ, ಆಳ್ವಾಸ್ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ ಮೈಯ್ಯ, ಶಾಂತರಾಮ ರಾವ್, ಅಲೆತ್ತೂರು ನರಸಿಂಹ ಮೈಯ್ಯ, ಚಂದ್ರಮೋಹನ ರಾವ್, ಎ. ಮಿಥುನ ರಾವ್, ಅಲೆತ್ತೂರು ಶರತ್ ಮೈಯ್ಯ, ಕೆ. ಕಿಶೋರ್ ಕುಮಾರ್, ಶ್ರೀನಿವಾಸ ಹೊಳ್ಳ ಮಕಾರು, ಎ. ದನೇಶ್ವರ ರಾವ್, ಕೆ. ರಘುರಾಮ ರಾವ್, ಕೃಷ್ಣಕುಮಾರ ಸೋಮಯಾಜಿ, ವಿಶಾಲ ಹೆಗ್ಡೆ, ಚೇತನ ಮೈಯ್ಯ, ಅಶ್ವಿನಿ ಭಟ್, ಪದ್ಮನಾಭ ಹೊಳ್ಳ ಕೆ., ರಾಜಾರಾಮ ಐತಾಳ ಕೆ., ವೇಣುಗೋಪಾಲ ಹೊಳ್ಳ, ವಿಭವ ಮೈಯ್ಯ, ನವೀನ ರಾವ್, ಕೃಷ್ಣ ಹೊಳ್ಳ, ರಾಮಚಂದ್ರ ಮೈಯ್ಯ ಸೇರಿದಂತೆ ಹಲವರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *