Breaking
13 Jul 2026, Mon

ಆನಂದ ಕುಲಾಲ್ ಅವರಿಗೆ ‘ಸೇವಾರತ್ನ’ ಪ್ರಶಸ್ತಿ ಪ್ರದಾನ

ಮೂಡುಬಿದಿರೆ:ಆನಂದ ಕುಲಾಲ್ ಅವರು ಬಡ ಹಾಗೂ ಅಶಕ್ತ ದುಡಿಯಲು ಸಾಧ್ಯವಾಗದ ಹಿರಿಯರಿಗೆ ಮಧ್ಯಾಹ್ನದ ಊಟ ಹಾಗೂ ಬೆಳಗ್ಗಿನ ಮತ್ತು ಸಂಜೆ ತಿಂಡಿಯನ್ನು ಉಚಿತವಾಗಿ ಕಳೆದ ಒಂದು ವರ್ಷದಿಂದ ನೀಡುತ್ತಾ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರು ನೇತಾಜಿ ಬ್ರಿಗೇಡ್ ಸಂಸ್ಥೆಯ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯ ಮೂಲಕ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಕುಲಾಲ ಸಂಘ ಮೂಡುಬಿದಿರೆಯ ಸಂಘಟನಾ ಕಾರ್ಯದರ್ಶಿಯಾಗಿಯೂ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಮ್ಮ ಸ್ವಂತ ಸಂಪಾದನೆಯಲ್ಲಿಯೇ ಒಂದು ಭಾಗವನ್ನು ಸಮಾಜ ಸೇವಾ ಚಟುವಟಿಕೆಗಳಿಗೆ ಮೀಸಲಿಡುತ್ತಿರುವ ಇವರ ಉದಾರ ಮನೋಭಾವ ಮತ್ತು ಸೇವಾ ಕಾರ್ಯವನ್ನು ಗುರುತಿಸಿಆಕ್ಸಿಸ್ ಮಾಕ್ಸ್ ಲೈಫ್ ಇನ್ಸೂರೆನ್ಸ್ ಇವರು ಕೊಡಮಾಡುವ ಸೇವಾರತ್ನ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *