Breaking
25 May 2026, Mon

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಋಗ್ವೇದಿಯ ಪಂಚಾಯತನ ಪೂಜಾ ಪದ್ಧತಿ ಪಾಠಕ್ಕೆ ಚಾಲನೆ

ಬಂಟ್ವಾಳದ ಶ್ರೀ ರುದ್ರ ಪಠಣ ಸಮಿತಿ ಆಶ್ರಯದಲ್ಲಿ ಪಾಣೆಮಂಗಳೂರು ಸಮೀಪದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಋಗ್ವೇದೀಯ ಪಂಚಾಯತನ ಪೂಜಾ ಪದ್ಧತಿ ಪಾಠ ಸರಪಾಡಿ ವೇದಮೂರ್ತಿ ವಿಜಯಕೃಷ್ಣ ಐತಾಳರಿಂದ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಸಜೀಪ ಮಾಗಣೆ ತಂತ್ರಿಗಳಾದ ಎಂ. ಸುಬ್ರಮಣ್ಯ ಭಟ್ ಹಾಗೂ ಎ. ರವಿಶಂಕರ ಮಯ್ಯ, ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆಯ ಅಧ್ಯಕ್ಷರಾದ ಕೆ. ರಮೇಶ್ ಹೊಳ್ಳ, ಎಸ್. ವಿ. ಎಸ್. ಕಾಲೇಜು ಬಂಟ್ವಾಳದ ನಿವೃತ್ತ ಪ್ರಾಂಶುಪಾಲ ಸೀತಾರಾಮ ಮಯ್ಯ, ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಗಣೇಶ್ ಕಾರಂತ ಪ್ರಮುಖರಾದ ಶಾಂತರಾಮ ಮಯ್ಯ, ಜಯರಾಮ ಮಯ್ಯ, ರಾಮಚಂದ್ರ ಮಯ್ಯ, ಚಂದ್ರಮೋಹನ ರಾವ್, ಮಿಥುನ್ ರಾವ್, ಕೆ. ರಮೇಶ್ ರಾವ್ ಹಾಗೂ ನವೀನ್ ರಾವ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *