ಮೈಸೂರು: ಲಯನ್ಸ್ ಕ್ಲಬ್ ಆಫ್ ಮೈಸೂರು ಎಲೈಟ್ ಕ್ಲಬ್ ನ ವತಿಯಿಂದ ನಡೆದ ಗೌರವಾನ್ವಿತ ಗವರ್ನರ್ ಅವರ ಅಧಿಕೃತ ಭೇಟಿ ಹಾಗೂ ಚಾರ್ಟರ್ ನೈಟ್ ಸಂಭ್ರಮಾಚರಣೆಯಲ್ಲಿ ವಿಶೇಷವಾಗಿ ಮೈಸೂರಿನ ಹೆಸರಾಂತ ಸಮಾಜಸೇವಕ “ರಕ್ತದಾನಿ ಮಂಜು” ಅವರಿಗೆ ವಿಶೇಷ ಸನ್ಮಾನ ನೀಡಲಾಯಿತು.

ಲಯನ್ಸ್ ಕ್ಲಬ್ ಆಫ್ ಮೈಸೂರು ಎಲೈಟ್ ಕ್ಲಬ್ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ, “ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ” ಪುರಸ್ಕೃತರಾದ ರಕ್ತದಾನಿ ಮಂಜು ಅವರು ಸಾವಿರಾರು ಜನರಿಗೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಹತ್ವದ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.

ಇದರ ಜೊತೆಗೆ ಹಲವಾರು ರಂಗದಲ್ಲಿ ಅವರದೇ ಆದಂತ ಸೇವೆಯನ್ನು ಸಮಾಜಕ್ಕೆ ನೀಡಿದ್ದಾರೆ ಕಲಾವಿದರಾಗಿ ಸಂಗೀತ ಗಾಯಕರಾಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಉಚಿತ ಆರೋಗ್ಯ ಶಿಬಿರಗಳನ್ನು ಮಾಡುತ್ತಾ PGRSS ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದಲ್ಲಿ ತಾಯಂದಿರನ್ನು ನೋಡಿಕೊಳ್ಳುತ್ತಾ ಸೇವೆಯನ್ನ ಮಾಡುತ್ತಿದ್ದಾರೆ ಇದೆಲ್ಲವನ್ನು ಪರಿಗಣಿಸಿ ಸಂಸ್ಥೆಯಿಂದ “ರಕ್ತದಾನಿ ಮಂಜು” ರವರಿಗೆ ಅವರಿಗೆ ಗೌರವಿಸಿ ನೆನಪಿನ ಕಾಣಿಕೆ ಮತ್ತು ಉಡುಗೊರೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲರಾದ ಲಯನ್ ರಾಜಶೇಖರ K.L., ಜಿಲ್ಲಾ ಕಾರ್ಯದರ್ಶಿ ಲಯನ್ ವೆಂಕಟೇಶ T.H., ಜಿಲ್ಲಾ ಖಜಾಂಚಿ ಲಯನ್ ಸುನೀಲ್ R.S., ಮೈಸೂರು ಎಲೈಟ್ ಅಧ್ಯಕ್ಷ ಲಯನ್ ಚಂದ್ರಶೇಖರ್ N.B., ಮೈಸೂರು ಎಲೆಟ್ ಲಯನ್ ಹೇಮಂತ್ ಕುಮಾರ್, ಎಲೆಟ್ ಕಾರ್ಯದರ್ಶಿ ಲಯನ್ ಸುರೇಶ ಬಿ.ಕೆ., ಖಜಾಂಚಿ ಮೈಸೂರು ಎಲೆಟ್ ಲಯನ್ ಅಭಿಜಿತ್ ಸಾರೋಲ್ಕರ್, ಮೈಸೂರು ಎಲೆಟ್ ಲಯನ್ ಸುರೇಶ K N, ಮೈಸೂರು ಎಲೆಟ್ ಲಯನ್ ನಾಗಣ್ಣ, ಒಕ್ಕಲಿಗರ ಕ್ಷೇಮ ವರದಿ ಸಂಘದ ಅಧ್ಯಕ್ಷರಾದ ಟಿ ಎನ್ ದಾಸೇಗೌಡ ರವರು ಮತ್ತು ಖಜಾಂಚಿ ಮೋಹನ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


