Breaking
7 May 2026, Thu

ಭಾರತೀಯ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ವಾಟರ್ ಬೆಡ್ ಹಸ್ತಾಂತರ

ಬೆಳ್ತಂಗಡಿ: ಕಳೆದ 20 ವರ್ಷಗಳಿಂದ ಹಾಸಿಗೆ ಹಿಡಿದಿರುವ ರಾಮಣ್ಣ ಗೌಡ ರವರಿಗೆ ಭಾರತೀಯ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ವಾಟರ್ ಬೆಡ್ ಹಸ್ತಾಂತರಿಸಲಾಯಿತು.

ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಪೋಷಕರಾದ ಎನ್.ಜಿ ಮೋಹನ್, ರವೀಂದ್ರನಾಥ್ ಉಚ್ಚಿಲ್ ರವರ ಪ್ರಾಯೋಜಕತ್ವದಲ್ಲಿ ಬೆಳ್ತಂಗಡಿ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷ ಹರಿದಾಸ್ ಎಸ್.ಎಂ ಪದಾಧಿಕಾರಿಗಳಾದ ನ್ಯಾಯವಾದಿ ಸುಕನ್ಯಾ ಹರಿದಾಸ್, ಶಿಕ್ಷಕಿ ಪರಿಮಳ, ನ್ಯಾಯವಾದಿ ಮನೋಹರ್ ರಾವ್ ನಿಡ್ಲೆ, ಉಪನ್ಯಾಸಕ ಸುಜೀತ್ ರಾವ್ ಉಜಿರೆ ರವರು ರಾಮಣ್ಣ ಗೌಡರವರಿಗೆ ವಾಟರ್ ಬೆಡ್ ಹಸ್ತಾಂತರಿಸಿದರು.

ಬೆಳ್ತಂಗಡಿ ರೆಡ್ ಕ್ರಾಸ್ ಸೊಸೈಟಿಯು ಕಳೆದ ಹಲವಾರು ವರ್ಷಗಳಿಂದ ವಿವಿಧ ವೈದ್ಯಕೀಯ ಶಿಬಿರಗಳನ್ನು, ತರಬೇತಿಗಳನ್ನು, ಕಾರ್ಯಕ್ರಮಗಳನ್ನು, ರಕ್ತದಾನ ಶಿಬಿರಗಳನ್ನು ನಿರಂತರವಾಗಿ ಹಮ್ಮಿಕೊಂಡಿರುವುದಲ್ಲದೆ, ವೈದ್ಯಕೀಯ ಪರಿಕರಗಳು, ಉಪಕರಣಗಳನ್ನು ಅರ್ಹರಿಗೆ ವಿತರಣೆ ಮಾಡುವ ಮೂಲಕ ಇಡೀ ಜಿಲ್ಲೆಯಲ್ಲೇ ಅತ್ಯುತ್ತಮ ಕಾರ್ಯಕ್ರಮ ಸಂಘಟಿಸುತ್ತಿದೆ.

Leave a Reply

Your email address will not be published. Required fields are marked *