Breaking
2 May 2026, Sat

ದೇವರನ್ನು ಹತ್ತಿರದಿಂದ ಕಾಣಲು ಭಜನೆಯ ಮೂಲಕ ಸಾಧ್ಯ: ಡಾ ಪ್ರಭಾಕರ ಭಟ್

ಕೊರ್ಯಾರು: ಧಾರ್ಮಿಕತೆಯಲ್ಲಿ ಭಜನೆಗೆ ವಿಶಿಷ್ಟ ಶಕ್ತಿ ಇದ್ದು, ಭಜನೆಗೆ ಯಾವುದೇ ರೀತಿಯ ಆವಾ ಬಾವ ಇರುವುದಿಲ್ಲ. ಭಜನೆಗಳಲ್ಲಿ ಶ್ರೀಮಂತ, ಬಡವ, ಮೇಲು ಕೀಳು ಎಂಬ ಯಾವುದೇ ತಾರತಮ್ಯ ಇಲ್ಲ,ಭಕ್ತಿಯಿಂದ ಮಾಡುವ ಭಜನೆಯಿಂದ ದೇವರನ್ನು ಹತ್ತಿರದಿಂದ ಕಾಣಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಮನೆಯಲ್ಲಿ ಭಜನೆ ಹಾಡುವ ಮೂಲಕ ದೇವರಿಗೆ ಹತ್ತಿರ ವಾಗಿ ರಾಷ್ಟ್ರ ಕಾರ್ಯಕ್ಕೆ ಪ್ರತಿಯೊಬ್ಬರು ಸನ್ನದ್ದರಾಗಬೇಕು ಎಂದು ಆರ್ಎಸ್ಎಸ್ ಹಿರಿಯ ಮುಖಂಡ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ಭಜನೆ ಎನ್ನುವುದು ದೇವತಾ ಕಾರ್ಯದ ಪ್ರತೀಕವಾಗಿದ್ದು ಇದರಲ್ಲಿ ಸ್ಪರ್ಧೆ ಏರ್ಪಡಿಸುವುದು ಔಚಿತ್ಯ ಪೂರ್ಣವಲ್ಲ. ಭಜನೆಗಳಿಂದ ಹಿಂದೂ ರಾಷ್ಟ್ರ ಭಾರತವು ಭವಿಷ್ಯದಲ್ಲಿ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಲಿದ್ದು ಭಾರತವು ವಿಶ್ವ ಗುರುವಾಗುದರೊಂದಿದೆ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧ, ಗಲಾಟೆಗಳು ಕಡಿಮೆಯಾಗಲಿವೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಬಂಟ್ವಾಳ ತಾಲೂಕು ಕುಕ್ಕಿಪಾಡಿ ಗ್ರಾಮದ ಕೊರ್ಯಾರು ಶ್ರೀ ದುರ್ಗಾ ಮಹಮ್ಮಾಯಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ತತ್ವಮಸಿ ಶ್ರೀ ಅಯ್ಯಪ್ಪ ಭಜಕ ವೃಂದ ಪೊಳಲಿ ಇವರ ನೇತೃತ್ವದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಏರ್ಪಡಿಸಿರುವ ಭಜನಾ ಸಂಗಮೋತ್ಸವಕ್ಕೆ ದೀಪ ಪ್ರಜ್ವಲನೆ ಮಾಡಿ ಮಾತನಾಡಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಗುರಿಕಾರ ಗೋಪಾಲ ಗೌಡ ಕೊರ್ಯಾರು, ಎರಡನೇ ಗುರಿಕಾರ ಓಬಯ್ಯ ಗೌಡ, ಆಡಳಿತ ಮಂಡಳಿ ಮೊಕ್ತೇಸರ ಯಶೋದರ ಗೌಡ ಕೊರ್ಯಾರು, ಆಡಳಿತ ಮಂಡಳಿ ಕಾರ್ಯದರ್ಶಿ ಲೋಕಯ್ಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಮಂಚಕಲ್ಲು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗಂಗಾಧರ ಗೌಡ ಕುಕ್ಕೇಡಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಹೇಮಚಂದ್ರ ಗೌಡ ಸಿದ್ದಕಟ್ಟೆ, ಕಾರ್ಯದರ್ಶಿ ಸಂಜೀವ ಎಲ್ಪೇಲು,ಜೀರ್ಣದ್ದಾರ ಸಮಿತಿ ಗೌರವ ಅಧ್ಯಕ್ಷರಾದ ದುರ್ಗಾದಾಸ್ ಶೆಟ್ಟಿ ಕರೆಂಕಜೆ, ಪ್ರಭಾಕರ ಪ್ರಭು, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಗಣೇಶ್ ಕಣಿಯೂರು, ಮಹಿಳಾ ಸಮಿತಿ ಅಧ್ಯಕ್ಷೆ ಶೋಭಾ ಕಲ್ಪನೆ, ಗೌರವ ಅಧ್ಯಕ್ಷರಾದ ಕುಸುಮ ಕೋರ್ಯಾರು, ಉಷಾ ಅಚ್ಯುತ ಕಿರಣ್, ತಾರಾ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದೇವಣ್ಣ ಗೌಡ ಮೊಯಿಲ್ ಬೆಟ್ಟು ಸ್ವಾಗತಿಸಿ ಧನ್ಯವಾದವಿತ್ತರು

Leave a Reply

Your email address will not be published. Required fields are marked *