Breaking
27 Apr 2026, Mon

ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಶ್ರೀ ಗುರು ಫ್ರೆಂಡ್ಸ್ ಬೊಂಡಾಲ ಹಮ್ಮಿಕೊಂಡಂತ ಧಾರ್ಮಿಕ ಕಾರ್ಯಕ್ರಮ ಶ್ಲಾಘನೀಯವಾಗಿದೆ: ವೇದಮೂರ್ತಿ ಪರಕ್ಕಜೆ ಅನಂತನಾರಾಯಣ ಭಟ್

ಕಲ್ಲಡ್ಕ : ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಶ್ರೀ ಗುರು ಫ್ರೆಂಡ್ಸ್ ಬೊಂಡಾಲ ಹಮ್ಮಿಕೊಂಡಂತ ಧಾರ್ಮಿಕ ಕಾರ್ಯಕ್ರಮ ಶ್ಲಾಘನೀಯವಾಗಿದ್ದು, ಈ ಮೂಲಕ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿ ಬರಲಿ ಎಂದು ವೇದಮೂರ್ತಿ ಪರಕ್ಕಜೆ ಅನಂತನಾರಾಯಣ ಭಟ್ ಹೇಳಿದರು.

ಅವರು ಏ. 26 ರಂದು ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಶ್ರೀ ಗುರು ಫ್ರೆಂಡ್ಸ್ (ರಿ.) ಬೊಂಡಾಲ ಇದರ 26ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಮಹಾ ಗಣಪತಿ ದೇವಸ್ಥಾನ ಬೊಂಡಾಲದಲ್ಲಿ ನಡೆಯುವ ಮಹಾಮೃತ್ಯುಂಜಯ ಯಾಗ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ವಹಿಸಿ ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆ ಕೊಡುವಷ್ಟು ಧಾರ್ಮಿಕ ಕಾರ್ಯಕ್ರಮಗಳಿಗೆ ಕೊಡದಿರುವುದು ದುರಾದೃಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಗುರು ಫ್ರೆಂಡ್ಸ್ ನವರು ಆಯೋಜಿಸಿದ ಕಾರ್ಯಕ್ರಮ ಉತ್ತಮವಾಗಿದ್ದು ಭಕ್ತರು ಆದಷ್ಟು ಧಾರ್ಮಿಕ ಉಪನ್ಯಾಸಕ್ಕೆ ಆದ್ಯತೆ ಕೊಡಬೇಕು ಎಂದರು.

ಸಹಕಾರ್ಯವಾಹಿಕ ರಾಷ್ಟ್ರ ಸೇವಿಕ ತಾಲೂಕು ಸಮಿತಿಯ ಸುಧಾ ಭಟ್ ಕಶೆಕೋಡಿ ಮಾತನಾಡಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಿಸುವಲ್ಲಿ ತಾಯಂದಿರ ಪಾತ್ರ ಬಹಳ ಮುಖ್ಯವಾಗಿದ್ದು ಮಕ್ಕಳಿಗೆ ಬಾಲ್ಯದಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದರು.

ವೇದಿಕೆಯಲ್ಲಿ ನ್ಯಾಯವಾದಿ ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ, ರೋಟರಿ ಬಿಸಿ ರೋಡ್ ಸಿಟಿ ಸ್ಥಾಪಕ ಅಧ್ಯಕ್ಷ ಕೆ ಸತೀಶ್ ಕುಮಾರ್, ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಬಲ್ನಾಡು ಉಲ್ಲಾಳ್ತಿ ದೈವ ಪಾತ್ರಿ ಬಿ ಕೃಷ್ಣರಾಜ್ ನಂದಾವರ, ಹಿಂದೂ ಜಾಗರಣ ವೇದಿಕೆ ಕಲ್ಲಡ್ಕ ಪ್ರಮುಖ ರತ್ನಾಕರ್ ಶೆಟ್ಟಿ ಕಲ್ಲಡ್ಕ ಕಲ್ಲಡ್ಕ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್, ಮಹಾಗಣಪತಿ ದೇವಸ್ಥಾನ ಬೊಂಡಾಲ ಆಡಳಿತ ಮುಕ್ತೇಸರ ಜಯರಾಮ ಹೊಳ್ಳ ನಾಗ್ತಿಮಾರು, ಹೆಕ್ಸ್ ವೇರ್ ಟೆಕ್ನಾಲಜಿಸ್ ಜಯಪದ್ಮ ಎ ಬಿ ಬೆಂಗಳೂರು, ಬೊಳ್ಳಾಯಿ ಸ್ಪಂದನ ಕ್ಲಿನಿಕ್ ನ ಡಾಕ್ಟರ್ ಧನ್ವಿಶ್ ಪೂರ್ಲಿಪಾಡಿ, ಸ್ವಾಮಿ ವಿವೇಕಾನಂದ ಯುವಕ ಸಂಘ ಮೊಡಂಕಾಪು ಬಿಸಿ ರೋಡ್ ಅಧ್ಯಕ್ಷ ಸುನಿಲ್ ಕುಂದರ್, ಕಲ್ಲಡ್ಕ ಗೇರುಕಟ್ಟೆ ಉಮಾಶಿವ ಕ್ಷೇತ್ರದ ಅಧ್ಯಕ್ಷ ಈಶ್ವರ ಭಟ್ ರಾಕೋಡಿ, ಗಿರೀಶ್ ಸಾಲಿಯಾನ್ ಹೆಗಡೆಬೆಟ್ಟು ಪೂಂಜಾಲಕಟ್ಟೆ ಗುತ್ತು , ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕಿ ಮೋಹಿನಿ ಜಿ ಶೆಟ್ಟಿ, ಮಮತಾ ಎನ್ ರಂಜಿತ್, ಗುರು ಫ್ರೆಂಡ್ಸ್ ಬೊಂಡಾಲ ಗೌರವ ಅಧ್ಯಕ್ಷ ಸದಾಶಿವ ಸನಿಲ್, ಗುರು ಫ್ರೆಂಡ್ಸ್ ಬೊಂಡಾಲ ಅಧ್ಯಕ್ಷ ರಾಜೇಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ತ್ರಿಷಾ ಅನ್ವಿತಾ ಪ್ರಾರ್ಥಿಸಿ, ನಾಗೇಶ್ ಶೆಟ್ಟಿ ಬೊಂಡಾಲ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *