ಹೊಕ್ಕಡಿಗೋಳಿ: ಶ್ರೀ ಮಹಿಷಮರ್ದಿನಿ ಯಕ್ಷಗಾನ ವೃಂದ ಪೂಂಜ ಇವರ ಆಶ್ರಯದಲ್ಲಿ ಹೊಕ್ಕಾಡಿಗೋಳಿ ಆರಂಬೋಡಿ ಗ್ರಾಮ ಪಂಚಾಯತ್ ಬಳಿ, ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆಯ ವರಿಂದ ‘ಕಚೂರ ಮಾಲ್ದಿ’ ಎಂಬ ಯಕ್ಷಗಾನ ಬಯಲಾಟವು ನಡೆಯಿತು.

ನಿನ್ನೆ ನಡೆದ ಯಕ್ಷಗಾನದಲ್ಲಿ ಯಕ್ಷಗಾನ ಸಂಘಟಕ ಹರೀಶ್ ಹಿಂಗಾಣಿ ಆರಂಬೋಡಿ, ಮೇಳದ ಪ್ರಬಂಧಕ ರಮೇಶ್ ಕುಲಶೇಖರ, ಆರಂಬೋಡಿ ಗ್ರಾಮ ಪಂಚಾಯತ್ ಪಂಪ್ ಅಪರೇಟರ್, ನಿವೃತ್ತಿ ಸಿಬಂದಿ ಸದಾಶಿವ ಶೆಟ್ಟಿ ಹಸನಬೆಟ್ಟು ಇವರಿಗೆ ಸಂಘಟಕರ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ, ಮೂಡ ಅಧ್ಯಕ್ಷರು ಬೇಬಿಕುಂದರ್, ಸಿದ್ದಕಟ್ಟೆ ಬಿಲ್ಲವ ಸಂಘ ಅಧ್ಯಕ್ಷರು ಕಿರಣ್ ಮಂಜಿಲ, ಹೊಕ್ಕಾಡಿಗೋಳಿ ಲಾಂಡ್ರಿಯ ಮಾಲಕರು ಮೊಹಮ್ಮದ್ ಎಚ್.ಅಶೋಕ ಆಚಾರ್ಯ ಸಿದ್ದಕಟ್ಟೆ ಮತ್ತಿತ್ತರು ಉಪಸ್ಥಿತರಿದ್ದರು.



