Breaking
21 Jun 2026, Sun

ತಂದೆ ಹಾಗೂ ಮಗನ ನಡುವೆ ಗಲಾಟೆ: ಕತ್ತಿಯಿಂದ ತಂದೆಗೆ ಹಲ್ಲೆ, ಮಗನ ಬಂಧನ

ಬೆಳ್ತಂಗಡಿ: ತಂದೆ–ಮಗನ ನಡುವೆ ನಡೆದ ಗಲಾಟೆಯಲ್ಲಿ ಮಗ ತಂದೆಯ ಕುತ್ತಿಗೆಗೆ ಕತ್ತಿಯಿಂದ ಇರಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಟಿಂಬರ್ ಕೆಲಸ ಮಾಡುತ್ತಿದ್ದ ಭರತ್ (25) ಎಂದು ಗುರುತಿಸಲಾಗಿದೆ.

ಏ. 19ರಂದು ಕುಡಿದ ಮತ್ತಿನಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮಣಿಕೆ ನಿವಾಸಿ, ಗಾರೆ ಕೆಲಸ ಮಾಡುತ್ತಿದ್ದ ನಾರಾಯಣ ಮತ್ತು ಮಗನ ನಡುವೆ ಜಗಳ ಉಂಟಾಗಿದ್ದು, ಈ ವೇಳೆ ಭರತ್ ಕತ್ತಿಯಿಂದ ತಂದೆಯ ಕುತ್ತಿಗೆಗೆ ಇರಿದಿದ್ದಾನೆ ಎಂದು ತಿಳಿದುಬಂದಿದೆ.

ಗಾಯಗೊಂಡ ನಾರಾಯಣರನ್ನು ತಕ್ಷಣವೇ ಹತ್ತಿರದ ಮನೆಯವರು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *