Breaking
18 Jun 2026, Thu

ಕಡಲತೀರದಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿ ನೀರುಪಾಲಾದ ಯುವಕನ ಮೃತದೇಹ ಪತ್ತೆ

ಮಂಜೇಶ್ವರ: ಹೊಸಬೆಟ್ಟು ಕಡಲತೀರದಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದ ಯುವಕನ ಮೃತದೇಹ ಏ. 16 ರಂದು ಪತ್ತೆಯಾಗಿದೆ.

ಮೃತಪಟ್ಟ ಯುವಕನನ್ನು ಮಂಜೇಶ್ವರ ಚೌಕಿಯ ಉಮ್ಮರುಲ್ ಫಾರೂಕ್ – ರಝೀನಾ ದಂಪತಿ ಪುತ್ರ ಮುಹಮ್ಮದ್ ಜೈನುಲ್ ಆಬಿದ್ ಎಂದು ಗುರುತಿಸಲಾಗಿದೆ.

ಏ. 15 ರಂದು ಆಬಿದ್ ಅವರು ಸ್ನೇಹಿತರೊಂದಿಗೆ ಕಡಲತೀರಕ್ಕೆ ತೆರಳಿದ್ದ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದರು. ತಕ್ಷಣವೇ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು.

ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಏ. 16 ರಂದು ಅವರ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *