ಮಂಗಳೂರು: ವಿದ್ಯುತ್ ತಂತಿ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ಮಂಗಳೂರಿನ ಜೆಪ್ಪು ಮಹಾಕಾಳಿಪಡ್ಪು ಬಳಿ ಏ. 11 ರಂದು ನಡೆದಿದೆ.

ಮೃತಪಟ್ಟ ಬಾಲಕನನ್ನು ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದ ಜೆಪ್ಪು ಮಹಾಕಾಳಿಪಡ್ಪು ನಿರ್ಮಲ ನಗರದಲ್ಲಿ ವಾಸವಾಗಿದ್ದ ಕಣ್ಣನ ಗೌಡ ಎಂಬವರ ಪುತ್ರ ವರುಣ್ (15) ಎಂದು ಗುರುತಿಸಲಾಗಿದೆ.

ಏ. 11 ರಂದು ಜೆಪ್ಪು ಮಹಾಕಾಳಿಪಡ್ಪು ಬಳಿ ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಬಾಲ್ ಸಮೀಪದ ಮಂದಿರದ ಛಾವಣಿ ಮೇಲೆ ಬಿದ್ದಿದೆ. ಅದನ್ನು ತರಲು ಹೋದಾಗ ವಿದ್ಯುತ್ ತಂತಿ ತಗುಲಿ ವರುಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.



