ಬಂಟ್ವಾಳ: ರುದ್ರ ಪಠಣಸಮಿತಿ ಬಂಟ್ವಾಳ ವತಿಯಿಂದ ಶಕ್ತಿ ಉದ್ವೀಪನಕ್ಕಾಗಿ ಲೋಕಕಲ್ಯಾಣಾರ್ಥವಾಗಿ ಅಂಗನ್ಯಾಸ, ಕರರ್ನ್ಯಾಸ ಸಹಿತ ಏಕ ಶ್ರುತಿಯಲ್ಲಿ ಸಾಮೂಹಿಕ ಗಾಯತ್ರಿ ಜಪ ಅನುಷ್ಠಾನ ಇಂದು (ಏ. 13) ಜರಗಿತು.

ರುದ್ರ ನಮಕ ಚಮಕ, ಗಣಪತಿ ಅಥರ್ವ ಶೀರ್ಷ, ಪುರುಷ ಸೂಕ್ತ, ಭಾಗ್ಯ ಸೂಕ್ತ, ಪಠಿಸಲಾಯಿತು.

ಕಾರ್ಯಕ್ರಮದಲ್ಲಿ ಸಜೀಪ ಮಾಗಣೆತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಕಾರ್ಯಕ್ರಮದ ರೂವಾರಿ ರಾಜರಾಮ ಐತಾಳ, ಎ.ರವಿ ಶಂಕರ ಮೈಯ್ಯ, ಪದ್ಮನಾಭ ಹೊಳ್ಳ, ನವೀನರಾವ್, ಕೆ. ರಮೇಶ್ ರಾವ್, ಸೀತಾರಾಮ ಮೈಯ್ಯ , ಶಾಂತ ರಾಮರಾವ್ , ರಾಮಚಂದ್ರ ಮೈಯ್ಯ, ಧನೇಶ್ವರ ರಾವ್, ಮಿಥುನರಾವ್ , ಪದ್ಮನಾಭ ರಾವ್, ಕೃಷ್ಣ ಸೋಮಾಯಾಜಿ, ರಮೇಶ ಮೈಯ, ಶ್ರೀನಿವಾಸ ಹೊಳ್ಳ, ಚಂದ್ರಮೋಹನರಾವ್, ಸೀತಾರಾಮ ಮೈಯ್ಯ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.



