ಬಂಟ್ವಾಳ: ಸಜೀಪ ಮಾಗಣೆ ಶ್ರೀ ನಡಿಯೇಲು ದೈವಂಗಳು, ಶ್ರೀ ಉಳ್ಳಾಲ್ತಿ, ಶ್ರೀ ನಾಲ್ಕೈತ್ತಾಯ ಪರಿವಾರ ದೈವಗಳ ಕ್ಷೇತ್ರ ಅಗರಿ ಮಾಡ ಆಲಾಡಿ ಖಾನ ಜೀರ್ಣೋದ್ಧಾರದ ಅಂಗವಾಗಿ ನೂತನ ಶಿಲಾಮಯ ಮಾಡ ತಾಮ್ರ ಹೊದಿಕೆಯೊಂದಿಗೆ ನೂತನ ಧ್ವಜಸ್ತಂಭ ನಿರ್ಮಾಣದೊಂದಿಗೆ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ವು ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ವಿದ್ಯುಕ್ತವಾಗಿ ಜರಗಿತು.


ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸ್ವಸ್ತಿ ಪುಣ್ಯ ಹವಾಚನ ಭೂ ಶುದ್ದಿ ಹೋಮ ಸಪ್ತಶುದ್ಧಿ, ಗೋಪೂಜೆ, ವಾಸ್ತು ರಕ್ಷೋಘ್ನ ಹೋಮ, ಸುದರ್ಶನ ಹೋಮ, ವಾಸ್ತು ಬಲಿ, ವಾಸ್ತು ಪೂಜೆ, ಅಧಿವಾಸ ಪ್ರಾಯಶ್ಚಿತ್ತ ಹೋಮ, ಆಧ್ಯ ಗಣಯಾಗ, ಪಂಚಗವ್ಯ ಅಷ್ಟೋತ್ತರ ಶತ ಕಲಶ ಅಭಿಷೇಕ, ಪ್ರಧಾನ ಹೋಮ ಪ್ರತಿಷ್ಠಾ ಹೋಮ ಪ್ರಾಯಶ್ಚಿತ ಶಾಂತಿ ಹೋಮ , ನೂತನ ಧ್ವಜಸ್ಥಂಭ ಶುದ್ಧೀಕರಣ, ನೂತನ ತೀರ್ಥಭಾವಿ ಶುದ್ಧೀಕರಣ, ಶಿಖರ ಪ್ರತಿಷ್ಠೆ, ಶ್ರೀ ದೈವಂಗಳಪುನ ಪ್ರತಿಷ್ಠೆ, ಸಾನಿಧ್ಯ ಕಲಶ ಅಭಿಷೇಕ, ಬ್ರಹ್ಮ ಕಲಶ ಅಭಿಷೇಕ, ಪರ್ವ ಸೇವೆ, ಪ್ರಸನ್ನ ಪೂಜೆ, ಕಲ್ಪೋ ಕ್ತಪೂಜೆ, ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ, ಅನ್ನದಾನ ದೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಸಂಸದ ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ ರಮಾನಾಥ ರೈ, ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಪಾಲೆ ಮಂಟಮೆ ಸಂಸಾರ, ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಗಣೇಶ್ ನಾಯಕ್ ಯಾನೆ ಉಗ್ಗ ಶೆಟ್ಟಿ, ಬಿಜಂದಾರು ಗುತ್ತು ಶಿವರಾಮ ಭಂಡಾರಿ, ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳಶೆಟ್ಟಿ, ಮಾಡದಾರು ಗುತ್ತು ಗಡಿಪ್ರದಾನ ರಾಧನಾರಣ ಆಳ್ವ ಯಾನೆ ಶಶಿಧರ ರೈ, ನಗ್ರೀಗುತ್ತು ಜಯರಾಮ ಶೆಟ್ಟಿ, ನಗ್ರೀಗುತ್ತು ವಿವೇಕ್ ಶೆಟ್ಟಿ, ಜೀವನ್ ಆಳ್ವ, ಹರೀಶ್ ರೈ, ಎಸ್ ಶ್ರೀಕಾಂತ್ ಶೆಟ್ಟಿ, ದೇವಿಪ್ರಸಾದ್ ಪೂಂಜ, ಯಶೋಧರ ರೈ, ನಿತಿನ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.



